ಮಡಿಕೇರಿ, ಫೆ. 29: ಲೇಡಿ ಸುಪೀರಿಯರ್ ಸಿಸ್ಟರ್ ಅಂತೋಣಿಯಮ್ಮ, ಬ್ಲಾಕ್ ನಂ. 9, ಸಂತ ಜೋಸೆಫರ ಆಶ್ರಮ, ಕಾನ್ವೆಂಟ್ ರಸ್ತೆ, ಮಡಿಕೇರಿಯಲ್ಲಿ ಸಂತ ಜೋಸೆಫರ ಶಾಲೆಗೆ ಸೇರಿದ ಅವರ ಸ್ವಂತ ಜಾಗದಲ್ಲಿ ಸರ್ವೆ ನಂ. 1, 1/1, 1/2, 1/3, 1/4, 1/5, 1/6, 1/7, 1/8 ಹಾಗೂ 1/9 ರಲ್ಲಿ ಧಾರ್ಮಿಕ ಉಪಯೋಗಕ್ಕಾಗಿ ಕಟ್ಟಡವನ್ನು ನಿರ್ಮಿಸಲು ಕಟ್ಟಡ ಪರವಾನಗಿ ಕೋರಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರದ ಆದೇಶದಂತೆ ಅನುಮೋದಿತ ಮಹಾ ಯೋಜನೆಗಳ ವಲಯ ನಿಯಮಾವಳಿಗಳನ್ವಯ ವಿವಿಧ ವಲಯಗಳಲ್ಲಿ ಧಾರ್ಮಿಕ ಉಪಯೋಗದ ಕಟ್ಟಡಗಳನ್ನು ಅನುಮತಿ ನೀಡುವ ಮೊದಲು ಸಾರ್ವಜನಿಕ ಮಾಹಿತಿಗಾಗಿ ಪ್ರಚುರ ಪಡಿಸಿ, ಆಕ್ಷೇಪಣೆಗಳೇನಾದರು ಇದ್ದಲ್ಲಿ 15 ದಿವಸಗಳೊಳಗಾಗಿ ನಗರಸಭೆಗೆ ಪೂರಕ ದಾಖಲಾತಿಗಳೊಂದಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅವಧಿ ನಂತರ ಬರುವ ತಕರಾರುಗಳನ್ನು ಪರಿಗಣಿಸಲಾಗುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ 15 ದಿವಸದೊಳಗೆ ನಗರಸಭೆ ಕಚೇರಿಗೆ ಲಿಖಿತವಾಗಿ ತಮ್ಮ ಆಕ್ಷೇಪಣೆಯನ್ನು ನೀಡಬಹುದು ಎಂದು ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ.