*ಗೋಣಿಕೊಪ್ಪ, ಫೆ. 29: ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ವತಿಯಿಂದ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಹೊಲಿಗೆ ತರಬೇತಿ ಹೊಂದಿದ ಮಹಿಳೆಯರಿಗೆ ವಿತರಿಸಲಾಯಿತು.
ಪೆÇನ್ನಂಪೇಟೆ, ಮಾದಾಪುರ, ಮಡಿಕೇರಿ ಭಾಗಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಫಲಾನುಭವಿಗಳು ಈ ಸೌಲಭ್ಯವನ್ನು ಪಡೆದುಕೊಂಡರು. ಆಶ್ರಮ ಸಹಯೋಗದ ಶ್ರೀ ಶಾರದಾ ಹೊಲಿಗೆ ಹಾಗೂ ಕಸೂತಿ ತರಬೇತಿ ಸಂಸ್ಥೆ ವತಿಯಿಂದ ಮಡಿಕೇರಿ ಮಾದಾಪುರ ಪೆÇನ್ನಂಪೇಟೆ ಭಾಗಗಳಲ್ಲಿ ತರಬೇತಿ ಹೊಂದಿ ಉತ್ತೀರ್ಣರಾದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಮತ್ತು ಮನೆಯ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಇಂತಹ ತರಬೇತಿಗಳು ಅಗತ್ಯವಾಗಿದೆ. ರಾಮಕೃಷ್ಣ ಆಶ್ರಮವು ಮಹಿಳೆಯರು ಬದುಕಿನ ಬಗ್ಗೆ ಆಶಾ ಭಾವನೆ ಹೊಂದಿ ಉತ್ತಮ ಜೀವನ ನಡೆಸುವ ಉದ್ದೇಶದೊಂದಿಗೆ ಹೊಲಿಗೆ ತರಬೇತಿಗಳನ್ನು ನೀಡುತ್ತಿದೆ ಎಂದು ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪಾನಂದ ಅವರು ತಿಳಿಸಿದರು.
ತರಬೇತಿ ಹೊಂದಿದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ರಾಮಕೃಷ್ಣಾಶ್ರಮದ ಮೂಲಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ವಿತರಿಸಿದರು. ಈ ಸಂದರ್ಭ ಸ್ವಾಮೀಜಿಗಳಾದ ಪರಹಿತನಂದಾಜೀ, ಇಷ್ಟ ಸೇವಾನಂದಾಜೀ ಸೇರಿದಂತೆ ಹಲವರು ಹಾಜರಿದ್ದರು.