ಕೂಡಿಗೆ, ಫೆ. 28: ಗುಮ್ಮನಕೊಲ್ಲಿಯ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಮೂರನೇ ಆವೃತ್ತಿಯ ಗುಮ್ಮನಕೊಲ್ಲಿ ಪ್ರೀಮಿಯರ್ ಲೀಗ್; ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಗುಮ್ಮನಕೊಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದಿ. ಜಿ.ಕೆ. ರವೀಂದ್ರ ಅವರ ಜ್ಞಾಪಕಾರ್ಥ ಹಾಗೂ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳುವ ಮೂಲಕ ಆಟಗಾರರ ನಡುವೆ ಉತ್ತಮ ಬಾಂಧವ್ಯವೃದ್ಧಿಗೆ ವೇದಿಕೆ ಒದಗಿಸಿದಂತಾಗಿದೆ. ಬಸವೇಶ್ವರ ಯುವಕ ಸಂಘವು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳನ್ನು ಪೆÇ್ರೀತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕ್ರೀಡಾಕೂಟದಲ್ಲಿ ಗುಮ್ಮನಕೊಲ್ಲಿಯ 4 ತಂಡಗಳು ಪಾಲ್ಗೊಂಡಿದ್ದವು.

ಗುಮ್ಮನಕೊಲ್ಲಿಯ ಹೆಚ್.ಎಂ. ಬ್ರದರ್ಸ್ ತಂಡವು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡರೆ, ಗುಮ್ಮನಕೊಲ್ಲಿಯ ಜೈ ಫ್ರೆಂಡ್ಸ್ ತಂಡವು ದ್ವಿತೀಯ ಬಹುಮಾನವನ್ನು ಪಡೆಯಿತು. ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯುಕ್ತಿಕ ಬಹುಮಾನ ನೀಡಲಾಯಿತು. ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್, ದೊಡ್ಡಣ್ಣ, ಜಯಲಕ್ಷ್ಮಿ, ಸರಸ್ವತಿ, ವಿಶ್ವ, ಬಸವೇಶ್ವರ ಯುವಕ ಸಂಘದ ಪ್ರಮುಖರಾದ ಅನುದೀಪ್, ಆಸಿಫ್, ವಸಂತ, ನವೀನ, ಧನಪಾಲ ಮತ್ತಿತರರು ಹಾಜರಿದ್ದರು.