ಗೋಣಿಕೊಪ್ಪ ವರದಿ, ಫೆ. 26: ಉತ್ತಮ ಆಹಾರ ಪದ್ಧತಿ ಸಾಧನೆಗೆ ಸಹಕಾರಿಯಾಲಿದೆ ಎಂದು ಒಲಿಂಪಿಯನ್ ಸಣ್ಣುವಂಡ ಕೆ. ಉತ್ತಪ್ಪ ಸಲಹೆ ನೀಡಿದರು.

ಗೋಣಿಕೊಪ್ಪ ಕಾವೇರಿ ಕಾಲೇಜು ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಶ್ರಮದೊಂದಿಗೆ ಶಿಸ್ತು ಮೈಗೂಡಿಸಿಕೊಂಡಲ್ಲಿ ಹೆಚ್ಚು ಸಾಧನೆಗೆ ಅವಕಾಶ ಸಿಗಲಿದೆ. ಉತ್ತಮ ಆಹಾರ ಪದ್ದತಿ ನಮ್ಮ ದೈಹಿಕ ಸಾಮಥ್ರ್ಯಕ್ಕೆ ಸಹಕಾರಿಯಾಗಲಿದ್ದು, ಈ ಬಗ್ಗೆ ಹೆಚ್ಚು ಏಕಾಗ್ರತೆ ಸಾಧಿಸಬೇಕು ಎಂದರು.

ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಎಂ.ಟಿ. ನಾಣಯ್ಯ ಮಾತನಾಡಿ, ಭವಿಷ್ಯದಲ್ಲಿ ಕುಟುಂಬವನ್ನು ನಿರ್ವಹಿಸುವಂತಹ ಜವಾಬ್ದಾರಿ ಹೊರಲು ಸಣ್ಣ ವಯಸ್ಸಿನಲ್ಲಿಯೇ ಆಸಕ್ತಿ ತೋರಬೇಕು. ಹೆಣ್ಣು-ಗಂಡು ಎಂಬ ತಾತ್ಸಾರ ತೋರದೆ ಎಲ್ಲಾರೂ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕುಸುಮಾಧರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ ಕಾಲೇಜು ವಾರ್ಷಿಕ ವರದಿ ವಾಚಿಸಿದರು. ಶೈಕ್ಷಣಿಕ ಹಾಗೂ ಪಠ್ಯೇತರವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಿಗೆ ಸಹಕರಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷೆ ಕೆ.ಜೆ. ತಂಗಮ್ಮ, ಪಿ.ಎ. ಬೆಳ್ಯಪ್ಪ, ಜಂಟಿ ಕಾರ್ಯದರ್ಶಿಗಳಾದ ವಿ.ಎಸ್. ಲಿಕಿತಾ, ಬಿ.ಯು. ಯಶಿಕಾ, ಸಾಂಸ್ಕøತಿಕ ಕಾರ್ಯದರ್ಶಿ ಎಂ.ಕೆ. ದೇಚಮ್ಮ, ಕ್ರೀಡಾ ಕಾರ್ಯದರ್ಶಿ ಎ.ಎಂ. ಹೇಮಂತ್, ಪಿ.ಯುವ ವಿಭಾಗದ ಜಂಟಿ ಕಾರ್ಯದರ್ಶಿ ಅಲ್ ಅಮೀನ್, ಸಿ.ಎಸ್. ಸುಶ್ಮಿತಾ, ಸಾಂಸ್ಕøತಿಕ ಕಾರ್ಯದರ್ಶಿ ವಸುಂಧರ ಭಾರ್ಗವ್ ಆಯಾ ವಿಭಾಗದ ವರದಿ ವಾಚನ ಮಾಡಿದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಚೆರಿಯಪಂಡ ಕೆ. ಉತ್ತಪ್ಪ, ಕಾರ್ಯದರ್ಶಿ ಕುಪ್ಪಂಡ ಜಿ. ಉತ್ತಪ್ಪ, ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ರೀತಾ, ಪದವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಟಿ.ಪಿ. ಸುಜಯ್, ಪದವಿಪೂರ್ವ ವಿದ್ಯಾರ್ಥಿ ಸಂಘದ ಸಂಚಾಲಕಿ ಡಾ. ರೇಖಾ ಚಿಣ್ಣಪ್ಪ ಉಪಸ್ಥಿತರಿದ್ದರು.