ಮಡಿಕೇರಿ, ಫೆ. 27: ಫೀ.ಮಾ. ಕಾರ್ಯಪ್ಪ ಕಾಲೇಜು, ಚರಿತ್ರೆ ಹಾಗೂ ಮನುಷ್ಯ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಸಂಸ್ಕøತಿ ಹಾಗೂ ಚರಿತ್ರೆ ಬಗ್ಗೆ ವಿಚಾರ ಮಂಡನೆ, ನಾಣ್ಯ ಹಾಗೂ ಅಂಚೆ ಚೀಟಿಗಳ ಸಂಗ್ರಹ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾ. 29 ರಂದು ಬೆಳಿಗ್ಗೆ 10.30ಕ್ಕೆ ಫೀ.ಮಾ. ಕಾರ್ಯಪ್ಪ ಕಾಲೇಜು ಸೆಮಿನಾರ್ ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಡಾ. ಸಿ. ಜಗತ್ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್‍ಪಿ ಸುಮನ್ ಡಿ. ಪಣ್ಣೇಕರ್ ಭಾಗವಹಿಸುವರು.

ಬೆಂಗಳೂರಿನ ಆರ್.ಬಿ.ಎ.ಎನ್. ಎಂ.ಎಸ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅವನೀಶ್ ವಿ. ವಿಚಾರ ಮಂಡನೆ ಮಾಡುವರು ಎಂದು ಚರಿತ್ರೆ ವಿಭಾಗದ ಮುಖ್ಯಸ್ಥ ಡಾ. ಮೇ. ರಾಘವ ಅವರು ತಿಳಿಸಿದ್ದಾರೆ.