ಸೋಮವಾರಪೇಟೆ, ಫೆ.26: ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕಾ ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪುತ್ತೂರಿನಲ್ಲಿ ತಾ. 27ರಂದು (ಇಂದು) ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.
ಪುತ್ತೂರಿನ ಶಿವರಾಮಕಾರಂತ ಬಾಲಭವನ ಅಭಿವೃದ್ಧಿ ಸಮಿತಿ, ಸಹಾಯಕ ಆಯುಕ್ತರ ಕಚೇರಿ, ತಾಲೂಕು ಪತ್ರಕರ್ತರ ಸಂಘ, ತಾಲೂಕು ಯುವ ಜನ ಒಕ್ಕೂಟ, ರಾಷ್ಟ್ರೀಯ ಸೇವಾ ಯೋಜನೆ ಇವರುಗಳ ಸಹಕಾರದಲ್ಲಿ, ಬೆಂಗಳೂರಿನ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ನೀಡಲಾಗುವ ‘ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ’ಗೆ ಚಂದ್ರಿಕಾ ಅವರು ಆಯ್ಕೆಯಾಗಿದ್ದು, ತಾ. 27ರಂದು ಪುತ್ತೂರಿನ ಬಾಲಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವದು.