ಮಡಿಕೇರಿ, ಫೆ. 26: ಕೊಡಗು ಜಿಲ್ಲಾ ಆಡಳಿತದಿಂದ ತೆರವು ಗೊಂಡಿರುವ ನಗರದ ಕೋಟೆ ಯಲ್ಲಿರುವ ಅರಮನೆಗೆ ಕಾಯಕಲ್ಪ ನೀಡುವ ಕೆಲಸಕ್ಕೆ ಚಾಲನೆ ಲಭಿಸಿದೆ. ಕರ್ನಾಟಕ ರಾಜ್ಯ ಸರಕಾರ ಈಗಾಗಲೇ ರೂ. 53 ಲಕ್ಷ ಹಣ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಖಚಿತಪಡಿಸಿದ್ದಾರೆ.

ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ತುರ್ತು ಕೆಲಸಕ್ಕಾಗಿ ಈ ಮೊತ್ತವನ್ನು ಕರ್ನಾಟಕ ಸರಕಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಈಗಾಗಲೇ ಒದಗಿಸಿದೆ ಎಂದು ಜಿಲ್ಲಾಧಿಕಾರಿ ನೆನಪಿಸಿದರು.

ಇಂದು ಸಂಬಂಧಿಸಿದ ಇಲಾಖೆಯ ಉಸ್ತುವಾರಿ ಅಧಿಕಾರಿ ಸುನಿಲ್ ಹಾಗೂ ತಾಂತ್ರಿಕ ಸಿಬ್ಬಂದಿ ಅರಮನೆಗೆ ಭೇಟಿ ನೀಡಿ, ಕಟ್ಟಡದ ಮೇಲ್ಚಾವಣಿ ರಿಪೇರಿ ಹಾಗೂ ಇತರ ಕಾಮಗಾರಿ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಿದ್ದಾಗಿಯೂ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿ ದರು. ತಾ. 27 ರಿಂದ (ಇಂದಿನಿಂದ) ಕಾಮಗಾರಿ ಕೈಗೊಳ್ಳಲಿರುವು ದಾಗಿಯೂ ಸುಳಿವು ನೀಡಿದರು.