ಸೋಮವಾರಪೇಟೆ, ಫೆ. 26: ಸಮೀಪದ ಯಡೂರು ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅಖಿಲೇಶ್ ಭಾರತೀಯ ಸೇನೆಗೆ ಆಯ್ಕೆಯಾದ ಹಿನ್ನೆಲೆ, ಕಾಲೇಜಿನ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ವಿದ್ಯಾರ್ಥಿ ಅಖಿಲೇಶ್ ಅವರನ್ನು ಪೋಷಕ ಜಗದೀಶ್‍ರೊಂದಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಸನ್ಮಾನಿಸಿದರು. ನಂತರ ಮಾತನಾಡಿ, ದೇಶದÀ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಿರುವದು ಶ್ಲಾಘನೀಯ. ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಕಾಲೇಜಿನ ಪ್ರಾಧ್ಯಾಪಕರಾದ ಪ್ರವೀಣ್‍ಕುಮಾರ್, ರಾಜು, ಶಿವಮೂರ್ತಿ, ಧನಲಕ್ಷ್ಮೀ, ಕಚೇರಿ ಸಿಬ್ಬಂದಿ ಜವರ ಮತ್ತಿತರರು ಉಪಸ್ಥಿತರಿದ್ದರು.