ವೀರಾಜಪೇಟೆ, ಫೆ. 27: ಕುಟ್ಟ ಗ್ರಾಮದ ಅನುಗ್ರಹ ಹಿಂದುಸ್ಥಾನ್ ಪೆಟ್ರೋಲಿಯಂ ದಕ್ಷಿಣ ಕೊಡಗಿನ ಬೆಳೆಗಾರರಿಗೆ ಮತ್ತು ವಾಹನ ಮಾಲೀಕರಿಗೆ ಅನುಕೂಲವಾಗುವಂತೆ ಒಂದು ಯೋಜನೆಯನ್ನು ರೂಪಿಸಿದ್ದು, ಯೋಜನೆಯಂತೆ ಪ್ರತಿ ಒಂದು ಸಾವಿರ ರೂಪಾಯಿ ಮೌಲ್ಯದ ಡೀಸೆಲ್ ತುಂಬಿಸುವವರಿಗೆ ಒಂದು ಕೂಪನ್ ನೀಡಲಿದ್ದು ವಿಜೇತರಿಗೆ ಮೊದಲನೇ ಬಹುಮಾನವಾಗಿ ಆಕ್ಟಿವಾ ಹೋಂಡ, ಎರಡನೇ ಬಹುಮಾನ ಅಟೋಮೆಟಿಕ್ ವಾಷಿಂಗ್ ಮಿಷನ್, ಮೂರನೇ ಬಹುಮಾನ ಮೋಟೋ ಮೊಬೈಲ್ ಫೋನ್ ಅಲ್ಲದೆ ನೂರು ಸಮಾಧಾನಕರ ಬಹುಮಾನ ನೀಡಲಾಗುವುದು. ಕುಟ್ಟದ ಕಾಫಿ ಬೆಳೆಗಾರ ತೀತಿರ ಮಂದಣ್ಣ ಮೊದಲನೇ ಕೂಪನ್ ನೀಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ವಿಜಯಾ ಬ್ಯಾಂಕ್‍ನ ಮೆನೇಜರ್ ಅಮಿತ್ ಮತ್ತು ಅರವಿಂದ್ ಭಟ್, ಚಕ್ಕೇರ ರಾಬಿನ್, ಚಕ್ಕೇರ ಗಣಪತಿ, ಪ್ರತಾಪ್, ಸುರೇಶ್ ಮಂಚಳ್ಳಿ, ರವಿ ಮಂಚಳ್ಳಿ, ಅಜಯ್, ನರೇಂದ್ರ,ದಿಲನ್, ಸುಳ್ಳಿಮಾಡ ವಾಸು, ಮಾಲೀಕರಾದ ಚಂದನ್ ಕಾಮತ್, ಕೇಶವ ಕಾಮತ್ ಮತ್ತು ಸಂಧ್ಯಾ ಕಾಮತ್ ಉಪಸ್ಥಿತರಿದ್ದರು.