ಮಡಿಕೇರಿ, ಫೆ. 26: ಇತ್ತೀಚೆಗೆ ಇಂಟರ್‍ನ್ಯಾಷನಲ್ ಮಬುನಿ ಹ ಶಿಟೋ-ರಿಯೋ ಕರಾಟೆ ಅಸೋಸಿಯೇಶನ್ ವತಿಯಿಂದ ಮೈಸೂರಿನ ಯೂನಿವರ್ಸಿಟಿ ಜಿಮ್‍ನಾಸ್ಟಿಕ್ ಹಾಲ್‍ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲೆಯ ವಿಭಾಗದಿಂದ ಭಾಗವಹಿಸಿದ ಕರಾಟೆ ಪಟುಗಳಾದ ಶಶಾಂಕ್, ಚರಣ್, ಲಿಪಿಕಾ, ಪ್ರತ್ವಿಕ್, ಪೂರ್ಣ ಚೆಂಗಪ್ಪ, ಕಾವೇರಮ್ಮ, ಲತೀಕ್ಷ, ಚೈತನ್ಯ ಮತ್ತು ಅಕ್ಷಯ್ ಇವರು 3 ಚಿನ್ನ ಮತ್ತು 3 ಬೆಳ್ಳಿ ಮತ್ತು 8 ಕಂಚಿನ ಪದಕಗಳನ್ನು ಪಡೆಯುವ ಸಾಧನೆ ಮಾಡಿದ್ದಾರೆ.
ಇವರು ಸೆನ್ಸಾಯ್ ಮತ್ತು ನ್ಯಾಷನಲ್ ರೆಫ್ರಿ, ನಾಗೇಂದ್ರಪ್ಪ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಮತ್ತು ಮುಖ್ಯ ಶಿಕ್ಷಕ ಪ್ರಶಾಂತ್, ಶಿಕ್ಷಕರು ಹಾಗೂ ಇತರರು ಇದ್ದರು.