ಕ್ರೀಡೆಯ ತವರೂರು ಎಂದೇ ಕರೆಯಲ್ಪಡುವ ಕಾವೇರಿಯ ತವರು ಜಿಲ್ಲೆ ಕೊಡಗಿನಿಂದ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿನ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು, ತಮ್ಮ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡಗಿವೆ. ಕಳೆದ ಏಳು ವರ್ಷಗಳ ಹಿಂದೆ ಆರಂಭವಾದ ಚೆಟ್ಟಳ್ಳಿಯ ಕೆ.ಕೆ.ಎಫ್.ಸಿ ಫುಟ್ಬಾಲ್ ಕ್ಲಬ್ ಇದೀಗ ತನ್ನ ಯಶಸ್ವಿ ಏಳನೇ ವರ್ಷಕ್ಕೆ ದಾಪುಗಾಲಿಟ್ಟಿದೆ.
ಚೆಟ್ಟಳ್ಳಿಯ ಇಬ್ಬರು ಯುವಕರು ಸೇರಿ ಚೆಟ್ಟಳ್ಳಿಯ ಒಂದಷ್ಟು ಪ್ರತಿಭಾವಂತ ಫುಟ್ಬಾಲ್ ಕ್ರೀಡಾಪಟುಗಳಿಗೆ ಪಂದ್ಯಾಟದಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ಮಾಡಿ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದರು. ಮುಂದೊಂದು ದಿನ ಈ ಇಬ್ಬರು ಯುವಕರ ಹೆಸರೇ ಈ ಸಂಸ್ಥೆಯ ಹೆಸರಾಗಿ ಬದಲಾಗುತ್ತೆ ಎಂದು ಯಾರೂ ಕೂಡ ಊಹೆ ಮಾಡಿರಲಿಲ್ಲ.
ಹೀಗೆ ಇಬ್ಬರು ಯುವಕರಿಂದ ಆರಂಭವಾದ ಕೆಕೆಎಫ್.ಸಿ (ಕುಟ್ಟಿ ಹಾಗೂ ಕುಟ್ಟಾಪಿ) ಫುಟ್ಬಾಲ್ ಕ್ಲಬ್ನಲ್ಲಿ ಇಂದು 30 ಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಫುಟ್ಬಾಲ್ ಕ್ಲಬ್ ಅಂದರೆ ಎಲ್ಲರಿಗೂ ಸಹಜವಾಗಿ ತಿಳಿಯುವುದೇನೆಂದರೆ ಬರೀ ಕ್ರೀಡಾಕೂಟಗಳಿಗೆ ಮಾತ್ರ ಸೀಮಿತವಾಗಿದ್ದು ಎಂದು.
ಆದರೆ ಕೆ.ಕೆ.ಎಫ್.ಸಿ ಫುಟ್ಬಾಲ್ ಕ್ರೀಡಾಕೂಟದೊಂದಿಗೆ ಕಳೆದ ಏಳು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ ಚೆಟ್ಟಳ್ಳಿ ಜನತೆಯ ಮನೆ ಮಾತಾಗಿದೆ.
ಕಳೆದ ಆರು ವರ್ಷಗಳಿಂದ ಗಾಂಧಿಜಯಂತಿಯ ಪ್ರಯುಕ್ತ ಕೆಕೆ.ಎಫ್.ಸಿ ವತಿಯಿಂದ ಚೆಟ್ಟಳ್ಳಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡುತ್ತಾ ಬಂದಿದೆ. ಅಲ್ಲದೇ ಶಿಬಿರದಲ್ಲಿ ಕ್ಲಬ್ನ 30ಕ್ಕೂ ಹೆಚ್ಚು ಸದಸ್ಯರು ಪ್ರತೀ ವರ್ಷ ರಕ್ತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಹಾಗೂ ಶ್ರಮದಾನವನ್ನು ಕೂಡ ಮಾಡುತ್ತಾ ಬಂದಿದ್ದಾರೆ.
ದೇಶ ಪ್ರಗತಿ ಸಾಧಿಸಬೇಕಾದರೆ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಮಾಜಿ ರಾಷ್ಟ್ರಪತಿ ಅಬ್ದುಲ್ಕಲಾಮ್ರವರ ಮಾತಿಗೆ ಅನುಗುಣವಾಗಿ ಕ್ರೀಡೆಯ ತವರೂರು ಎಂದೇ ಕರೆಯಲ್ಪಡುವ ಕಾವೇರಿಯ ತವರು ಜಿಲ್ಲೆ ಕೊಡಗಿನಿಂದ ಹಲವಾರು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿನ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು, ತಮ್ಮ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡಗಿವೆ. ಕಳೆದ ಏಳು ವರ್ಷಗಳ ಹಿಂದೆ ಆರಂಭವಾದ ಚೆಟ್ಟಳ್ಳಿಯ ಕೆ.ಕೆ.ಎಫ್.ಸಿ ಫುಟ್ಬಾಲ್ ಕ್ಲಬ್ ಇದೀಗ ತನ್ನ ಯಶಸ್ವಿ ಏಳನೇ ವರ್ಷಕ್ಕೆ ದಾಪುಗಾಲಿಟ್ಟಿದೆ.

ದೇಶ ಪ್ರಗತಿ ಸಾಧಿಸಬೇಕಾದರೆ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಮಾಜಿ ರಾಷ್ಟ್ರಪತಿ ಅಬ್ದುಲ್ಕಲಾಮ್ರವರ ಮಾತಿಗೆ ಅನುಗುಣವಾಗಿ ಕೆಕೆಎಫ್.ಸಿ ಕಳೆದ ಆರು ವರ್ಷ ಗಳಿಂದ ಚೆಟ್ಟಳ್ಳಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ಹಾಗೂ ಚೆಟ್ಟಳ್ಳಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಕ್ಲಬ್ನ ಪ್ರತೀ ವರ್ಷದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರವಿಸುತ್ತಾ ಬಂದಿದೆ.
ಜಿಲ್ಲೆಯ ಪ್ರತಿಯೊಂದು ಗ್ರಾಮಗಳು ಒಂದಲ್ಲಾ ಒಂದು ವಿಚಾರಗಳಿಗೆ ಹೆಸರು ಪಡೆದಿದೆ. ಚೆಟ್ಟಳ್ಳಿಯಲ್ಲಿ ಫುಟ್ಬಾಲ್ ಪಂದ್ಯಾಟ ನಡೆಸಿದಾಗಲೆಲ್ಲ ಅತೀ ಹೆಚ್ಚು ಜನರು ಭಾಗವಹಿಸಿದ ಇತಿಹಾಸವಿದೆ. ಆದರೆ ಕ್ರಮೇಣ ಫುಟ್ಬಾಲ್ ಪಂದ್ಯಾಟ ಹಾಗೂ ಫುಟ್ಬಾಲ್ ಕ್ಲಬ್ಗಳು ಮೂಲೆ ಸೇರುತ್ತಾ ಬಂದಿದ್ದು, ಚೆಟ್ಟಳ್ಳಿಯ ಹಳೆಯ ಇತಿಹಾಸವನ್ನು ಕೆಕೆಎಫ್.ಸಿ ಕಳೆದ ಆರು ವರ್ಷಗಳಿಂದ ಮರುಕಳಿಸುವಂತೆ ಮಾಡಿದೆ. ಚೆಟ್ಟಳ್ಳಿಯಲ್ಲಿ ಫುಟ್ಬಾಲ್ ಕ್ರೀಡೆಗೆ ಮರುಜೀವ ನೀಡಿದ ಸಂಸ್ಥೆ ಎಂದೇ ಕೆಕೆಎಫ್.ಸಿ ಹೆಸರುವಾಸಿ ಯಾಗಿದೆ. ಯಾವುದೇ ಸಂಸ್ಥೆಗಳಿರಲಿ, ಕ್ರೀಡಾಕೂಟಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂಬದಕ್ಕೆ ನಿದರ್ಶನ ಎಂಬಂತೆ ಕೆಕೆಎಫ್.ಸಿ ಕ್ರೀಡೆಯೊಂದಿಗೆ ಸಮಾಜಮುಖಿ ಕಾರ್ಯಗಳನ್ನೂ ಮಾಡುತ್ತಾ ಬಂದಿದೆ ಎಂದು ಕ್ಲಬ್ನ ಸಂಸ್ಥಾಪಕ ಹಾಲಿ ಅಧ್ಯಕ್ಷ ಮೊಹಮ್ಮದ್ ರಫಿ (ಆಟೋ ಕುಟ್ಟಿ) ಹೇಳುತ್ತಾರೆ.
ಪ್ರತೀ ವರ್ಷ ಫುಟ್ಬಾಲ್ ಪಂದ್ಯಾಟವನ್ನು ದಾನಿಗಳ ಹಾಗೂ ಚೆಟ್ಟಳ್ಳಿಯ ಜನತೆಯ ಸಹಕಾರದಿಂದ ಆಯೋಜನೆ ಮಾಡುತ್ತಾ ಬಂದಿದ್ದೇವೆ, ಈ ವರ್ಷ ಕೂಡ ಫುಟ್ಬಾಲ್ ಪಂದ್ಯಾಟವನ್ನು ಆಯೋಜನೆ ಮಾಡಿದ್ದೇವೆ.
ಇದೇ ಫೆಬ್ರವರಿ 27 (ಇಂದಿನಿಂದ) ಮಾರ್ಚ್ 1 ರವರೆಗೆ ಚೆಟ್ಟಳ್ಳಿಯ ಫ್ರೌಡಶಾಲಾ ಮೈದಾನದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತದೆ ಎಂದು ಕ್ಲಬ್ನ ಸಂಸ್ಥಾಪಕ ಹಾಗೂ ಉಪಾಧ್ಯಕ್ಷ ಚಂದ್ರ (ಆಟೋ ಕುಟ್ಟಾಪಿ) ಹೇಳಿದರು.
-ಕೆ. ಎಂ. ಇಸ್ಮಾಯಿಲ್ ಕಂಡಕರೆ.