ಚೆಟ್ಟಳ್ಳಿ, ಫೆ. 25: ಚೆಟ್ಟಳ್ಳಿಯ ಶ್ರೀಮಂಗಲ ಊರಿನ ಭಗವತಿ ದೇವಸ್ಥಾನವು 1912 ರಲ್ಲಿ ಪ್ರತಿಷ್ಠಾಪನೆಗೊಂಡು ಅದು ಈಗಾಗಲೇ ಜೀರ್ಣಾವಸ್ಥೆಗೆ ತಲುಪಿತ್ತು. ಕಳೆದ ನಾಲ್ಕು ವರ್ಷದ ಹಿಂದೆ ಊರಿನ ಜನರು ಸೇರಿ ಸಮಿತಿಯೊಂದನ್ನು ರಚಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ತೊಡಗಿದ್ದರು.

ದೇವಸ್ಥಾನವು ಗರ್ಭಗುಡಿ ತೀರ್ಥ ಮಂಟಪ ಮತ್ತು ಸುತ್ತಂಬಲ ಪೌಳಿ ಗಳಿಂದ ಕೂಡಿದ್ದು, ಒಟ್ಟು ಎಪ್ಪತೈದು ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳುವ ನಕ್ಷೆ ಆಗಿತ್ತು . ಅದರಲ್ಲಿ ಪುತ್ತರಿರ ಕುಟುಂಬಸ್ಥರು ಮೂವತ್ತು ಲಕ್ಷ ವೆಚ್ಚದಲ್ಲಿ ಸುತ್ತಂಬಲವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. . ಅದರಂತೆ ಈಗಾಗಲೇ ಪುತ್ತರಿರ ಕುಟುಂಬಸ್ಥರು ಒಪ್ಪಿಕೊಂಡಂತೆ ತಮ್ಮ ಕೆಲಸವನ್ನು ಪೂರ್ಣ ಗೊಳಿಸಿದ್ದು ಇದೆ ತಿಂಗಳು 24 ರಿಂದ ನಡೆಯುವ ಅಷ್ಟಬಂದ ಪುನರ್‍ಪ್ರತಿಷ್ಠಾಪನೆಗೆ ದೇವಸ್ಥಾನದ ತಕ್ಕ ಮುಖ್ಯಸ್ಥರಿಗೆ ದೇವಸ್ಥಾನದ ಸುತ್ತಂಬಲವನ್ನು ವಹಿಸಲಿದ್ದಾರೆ ಎಂದು ಪುತ್ತರಿರ ಪಟ್ಟೆದಾರÀ ಎಂ. ಬಿದ್ದಪ್ಪ ಅವರು ತಿಳಿಸಿದ್ದಾರೆ.