ಕೊಯನಾಡು, ಫೆ. 25: ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ನಡೆಯಿತು. ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ಗಣೇಶ ಯುವ ಬಳಗ ಇದರ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯರಿಗೆ ಕ್ರೀಡೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕ್ರೀಡೋತ್ಸವದ ಧ್ವಜಾರೋಹಣ ವನ್ನು ದೇವಸ್ಥಾನದ ಅಧ್ಯಕ್ಷ ಪಿ.ಡಿ. ವಿಶ್ವನಾಥ್ ನೆರವೇರಿಸಿದರು. ಸಂಪಾಜೆ ಗ್ರಾಮ ಅಭಿವೃದ್ಧಿಯ ಹರಿಕಾರ ದಿ. ಬಾಲಚಂದ್ರ ಕಳಗಿ ಅವರ ಸ್ಮರಣೆಯೊಂದಿಗೆ ಸ್ಥಳೀಯ ರಸ್ತೆಗಳಿಗೆ ಕಳಗಿ ಅವರ ನಾಮಫಲಕ ನಿರ್ಮಾಣ ಮಾಡಿ ಬಾಲಚಂದ್ರ ಅವರ ತಂದೆ ಕಳಗಿ ವೆಂಕಪ್ಪ ಅವರು ಫಲಕ ಅನಾವರಣ ಮಾಡಿದರು. ನಂತರ ಸ್ಥಳೀಯರಿಗೆ ಕ್ರೀಡಾಕೂಟ ನೆರವೇರಿತು. ದೇವರಿಗೆ ದೀಪಾರಾಧನೆಗೊಂಡು ಸಭಾ ಕಾರ್ಯಕ್ರಮವು ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಪೆಲತಡ್ಕ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಲ್ಲಾಸ್ ಕೇನಾಜೆ, ಮಾಜಿ ಅಧ್ಯಕ್ಷರು, ಕುಮಾರ್ ಚೆದ್ಕಾರ್, ಅಧ್ಯಕ್ಷರು, ಸಂಪಾಜೆ ಗ್ರಾಮ ಪಂಚಾಯತ್, ಬಿ.ಆರ್.ಶಿವರಾಮ್ ಅಧ್ಯಕ್ಷರು ದೇವತಾರಾಧನ ಸಮಿತಿ ಸಂಪಾಜೆ, ಬಿ ಆರ್ ಸುಂದರ್ ಉಪಾಧ್ಯಕ್ಷರು ಸಂಪಾಜೆ ಗ್ರಾಮ ಪಂಚಾಯತ್, ಪರ್ಮಲೆ ಜಗದೀಶ್,ಅಧ್ಯಕ್ಷರು ಗಣೇಶ ಯುವ ಬಳಗ, ರಮಾದೇವಿ ಬಾಲಚಂದ್ರ ಕಳಗಿ, ಸದಸ್ಯರು ಗ್ರಾಮ ಪಂಚಾಯತ್ ಸಂಪಾಜೆ, ರಾಜಾರಾಮ್ ಕಳಗಿ, ಅಧ್ಯಕ್ಷರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಸುಂದರ.ಎ. ಕೆ, ಅಧ್ಯಕ್ಷರು ಅರೆಕಲ್ಲು ಶ್ರೀ ಅಯ್ಯಪ್ಪ ದೇವಸ್ಥಾನ, ಕುಂಞರಾಮ, ಅಧ್ಯಕ್ಷರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ದೇವರಕೊಲ್ಲಿ, ಸೇಂದಿಲ್ ಕುಮಾರ್, ಅಧ್ಯಕ್ಷರು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಅಧ್ಯಕ್ಷರು ಬಾಲಸುಬ್ರಹ್ಮಣ್ಯ ದೇವಸ್ಥಾನ ಚೆಡಾವು, ಪುಷ್ಪಾವತಿ, ಸೇವಾ ಪ್ರತಿನಿಧಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವೀನ್ ಕುಮಾರ್, ಮಾಜಿ ಅಧ್ಯಕ್ಷರು ಗಣೇಶ್ ಯುವ ಬಳಗ, ವೀರೇಂದ್ರ ಕೇನಾಜೆ, ವ್ಯವಸ್ಥಾಪಕರು ಅದ್ವೈತ ಹುಂಡಾಯಿ ಮಡಿಕೇರಿ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದೇರಣ್ಣ ದೇವರಗುಂಡ, ನಡುಬೆಟ್ಟು ಪುಟ್ಟಪ್ಪ, ಪೆಲತಡ್ಕ ದಿನೇಶ್, ದೇವರಗುಂಡ ಲಿಂಗಪ್ಪ ರವರನ್ನು ಯುವ ಬಳಗ ವತಿಯಿಂದ ಸನ್ಮಾನಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿ ಸಾಧಕರಿಂದ ಧಾರ್ಮಿಕ ಉಪನ್ಯಾಸ ಹಾಗೂ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀ ರಾಗ್ ಮ್ಯೂಸಿಕ್ ಪುತ್ತೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಉತ್ಸವದಲ್ಲಿ ಊರ, ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡು ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

- ಶಭರೀಶ್ ಕುದ್ಕುಳಿ