ಕರಿಕೆ, ಫೆ. 25: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ತೀವ್ರ ಹದಗೆಟ್ಟ ಭಾಗಮಂಡಲ-ಕರಿಕೆಗಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಸುಮಾರು ಹನ್ನೊಂದು ಕಿ.ಮಿ.ದೂರದವರೆಗೆ ರೂ. 5.1 ಕೋಟಿ ರೂಪಾಯಿ ವೆಚ್ಚದಲ್ಲಿ ಮರುಡಾಂಬರೀಕಣ, ಜಿ.ಪಂ. ವತಿಯಿಂದ ಗ್ರಾಮೀಣ ಕರಿಕೆ ಚೆತ್ತುಕಾಯ ದೊಡ್ಡಚೇರಿ ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅರವತ್ತು ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ ನಡೆಯಿತು.

ಜಿ.ಪಂ. ಹಾಗೂ ಐಟಿಡಿಪಿ ಇಲಾಖೆ ವತಿಯಿಂದ ಐದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಪಚ್ಚೆಪಿಲಾವು ಪಳ್ಳಿಕಳ್ಳ ರಸ್ತೆ, ಕುಂಡತ್ತಿಕಾನ ರಸ್ತೆ, ಅರ್ತುಕುಟ್ಟಿ ರಸ್ತೆ, ತೋಟಂ ಮಸೀದಿ ರಸ್ತೆ, ಕುಡಿಯಂಗಲ್ ರಸ್ತೆಗಳ ಉದ್ಘಾಟನೆ ಮಾಡಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳಾದ ಸತ್ಯ ನಾರಾಯಣ, ದೇವರಾಜ್, ಜಿ.ಪಂ. ಇಂಜಿನಿಯರ್ ಶ್ರೀಕಂಠಯ್ಯ, ಕುಡಿಯುವ ನೀರು ಯೋಜನೆಯ ಇಂಜಿನಿಯರ್ ಕೃತಿಕಾ, ಪ್ರಮುಖರಾದ ಹೊಸಮನೆ ಹರೀಶ್, ಯುವ ಮೋರ್ಚಾದ ಕಾಳನ ರವಿ, ನಿಡ್ಯಮಲೆ ಬಾಲಕೃಷ್ಣ, ಐಸಾಕ್, ಜಯಂತ, ವಿಜಯ, ಬಾಬು, ಆರ್‍ಎಂಸಿ ಸದಸ್ಯ ನಾರಾಯಣ ಸೇರಿದಂತೆ ಇತರೆ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.