ಕಣಿವೆ, ಫೆ. 25: ಒಂದಲ್ಲ ಎರಡಲ್ಲ, ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಮನೆಯಿಂದ ಹೊರನಡೆದಿದ್ದ ಹೆತ್ತವರ ಏಕೈಕ ಪುತ್ರ.... ಮನೆಯಿಂದ ಹೊರನಡೆದ ಮಗನು ಬೇಗನೇ ಮನೆಗೆ ಮರಳಲಿ ಎಂದು ಆ ಹೆತ್ತ ಜೀವ ಕಣಿವೆ, ಫೆ. 25: ಒಂದಲ್ಲ ಎರಡಲ್ಲ, ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಮನೆಯಿಂದ ಹೊರನಡೆದಿದ್ದ ಹೆತ್ತವರ ಏಕೈಕ ಪುತ್ರ.... ಮನೆಯಿಂದ ಹೊರನಡೆದ ಮಗನು ಬೇಗನೇ ಮನೆಗೆ ಮರಳಲಿ ಎಂದು ಆ ಹೆತ್ತ ಜೀವ ಬಂಧಿಯಾಗಿದ್ದ ಆ ಮಹಾತಾಯಿಗೆ ಇಪ್ಪತ್ತು ವರ್ಷಗಳ ಬಳಿಕ ಹೆತ್ತ ಮಗ ಪತ್ತೆಯಾದಾಗ ಆಗುವ ಆನಂದಕ್ಕೆ ಪಾರ ಉಂಟೇ...?

ಕುಶಾಲನಗರದ ಸೆರಗಿನ ಕಾವೇರಿ ನದಿ ದಂಡೆಯ ಚಿಕ್ಕಹೊಸೂರು ಗ್ರಾಮದ ಶಿವಮ್ಮ ಹಾಗೂ ತಮ್ಮಯ್ಯ ಅವರ ಏಕೈಕ ಪುತ್ರ ಶಿವಕುಮಾರ್ ಎಂಬಾತನ ಕಥೆ ಇದು. ಈತ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಕಾರ್ಪೆಂಟರ್ ಒಬ್ಬರ ಬಳಿ ಕುಷನ್ ಕಸೂತಿ ಕೆಲಸ ಮಾಡಿಕೊಂಡಿದ್ದ. ಅಂದು ಏಕೋ ಏನೋ ತನ್ನದಲ್ಲದ ತಪ್ಪಿಗೆ ಯಾವುದೋ ಆರೋಪ ಈತನ ಹೆಗಲೇರಿದಾಗ ಗೌರವಕ್ಕೆ ಅಂಜಿ ತನ್ನ ಹೆತ್ತವರನ್ನು ತೊರೆದು ದೂರದ ದೆಹಲಿಗೆ ಹೋಗಿದ್ದ.

ತಾನು ಮನೆಯಿಂದ ಮರೆಯಾಗಿ ಹೋಗಿ ಇಪ್ಪತ್ತು ವರ್ಷಗಳ ತನಕವೂ ತಾನು ಎಲ್ಲಿದ್ದೇನೆ. ಹೇಗಿದ್ದೇನೆ. ಏನು ಮಾಡಿಕೊಂಡಿದ್ದೇನೆ ಎಂಬ ಯಾವ ಮಾಹಿತಿಗಳನ್ನು ಕೂಡ ಮನೆಯವರಿಗೆ ತಿಳಿಸದಷ್ಟು ಕಟು ಮನಸ್ಥಿತಿಗೆ ಬಂದುಬಿಟ್ಟ. ದೆಹಲಿ ಬಳಿಕ ಹಲವು ವರ್ಷಗಳ ನಂತರ ಉತ್ತರ ಪ್ರದೇಶಕ್ಕೆ ಬಂದು ಅಲ್ಲಿ ನೆಲೆ ನಿಂತ.

ಇತ್ತ ಈತನ ಹೆತ್ತವರು ಮಗ ಬದುಕುಳಿದಿಲ್ಲ. ಬದುಕಿದ್ದರೆ ಇದುವರೆಗೂ ಮರಳಿ ಬಾರದೇ ಇರುತ್ತಿರಲಿಲ್ಲ. ಅಯ್ಯೋ ವಿಧಿಯೇ ಎಂದು ತನ್ನೆಲ್ಲಾ ದುಃಖ-ದುಮ್ಮಾನ ಎಲ್ಲವನ್ನು ವಿಧಿಯ ಮೇಲೆ ಹೊರಿಸಿ ಈತನ ಒಡ ಹುಟ್ಟಿದ್ದ ಇಬ್ಬರು ಸಹೋದರಿಯರನ್ನು ವಿವಾಹ ಮಾಡಿದರು.

ಆತನ ಪೂರ್ವಾಪರ ಎಲ್ಲವನ್ನು ತಿಳಿದ ಮೇಲೆ ಮೈ ರೋಮಾಂಚನಗೊಂಡು, ಪುಳಕಿತರಾಗಿ ಅಲ್ಲಿಯೇ ಆತನನ್ನು ತಬ್ಬಿ ಮುದ್ದಾಡಿದ್ದಾರೆ. ನೀನು ಬದುಕಿಲ್ಲ ಎಂದುಕೊಂಡಿದ್ದೆವು. ಅಯ್ಯೋ ವಿಧಿಯೇ ಕೊನೆಗೂ ಕಣ್ಣು ಬಿಟ್ಟು ಬಿಟ್ಟಾ ಎಂದು ಶಿವಕುಮಾರನ ಸೋದರ ಮಾವ ಕಂದಾಯ ಅಧಿಕಾರಿ ಚಿಕ್ಕಹೊಸೂರಿನ ಸೋಮಶೇಖರ್ ಅವರಿಗೆ ವಿಷಯ ತಿಳಿಸಿದಾಗ ಕೂಡಲೇ ಸೋಮಶೇಖರ್ ತಮ್ಮ ಕಾರಿನಲ್ಲಿ ತೆರಳಿ ಶಿವಕುಮಾರನನ್ನು ತಮ್ಮ ಮನೆಗೆ ಕರೆ ತಂದಿದ್ದಾರೆ.

ಈತನ ಸುಳಿವು ಸಿಕ್ಕ ವಿಷಯ ಆ ಹೆತ್ತ ತಾಯಿಯ ಕಿವಿಗೆ ಬೆಳಿಗ್ಗೆ ಬಿದ್ದಾಗ, ಆ ತಾಯಿ ತಮ್ಮ ಮನೆಯಲ್ಲಿ ಹಸುವಿನಿಂದ ಹಾಲು ಕರೆಯುತ್ತಿದ್ದರು. ಮಗನ ಇರುವಿಕೆ ಮತ್ತು ಆಗಮನದ ಸುದ್ದಿ ಕೇಳಿದ ಹೆತ್ತ ಜೀವ ಹಾಲು ಕರೆಯುವುದು ಅರ್ಧಕ್ಕೆ ನಿಲ್ಲಿಸಿ ಕರುವಿಗೆ ಪೂರ್ಣ ಕುಡಿಯಲು ಬಿಟ್ಟು ಓಡೋಡಿ ಬಂದು ಮಗನನ್ನು ತಬ್ಬಿ ಮುದ್ದಾಡುವಾಗ ನೆರೆದಿದ್ದ ನೆರೆಮನೆಯವರ ಕಣ್ಣಾಲಿಗಳೆಲ್ಲವು ತೇವವಾಗಿದ್ದವು. ಈತ ಮನೆಗೆ ಮರಳಿದ ವಿಷಯ ತಿಳಿಯುತ್ತಿದ್ದಂತೆಯೇ ಈತನ ಬೇರೆ ಬೇರೆ ಊರಿನ ಸಂಬಂಧಿಗಳು ತಂಡೋಪತಂಡವಾಗಿ ಈತನನ್ನು ನೋಡಲು ಧಾವಿಸುತ್ತಿದ್ದಾರೆ.

ಇದೀಗ ಸೋಮಶೇಖರ್ ಕುಟುಂಬ ಆ ಶಿವಕುಮಾರನಿಗೆ ಮತ್ತು ಕುಟುಂಬಕ್ಕೆ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾರೆ. ಬಳಿಕ ‘ಶಕ್ತಿ’ಯೊಂದಿಗೆ ತಡವರಿಸಿ ಹಿಂದಿ ಮಿಶ್ರಿತ ಕನ್ನಡದಲ್ಲಿ ಮಾತನಾಡಿದ ಶಿವಕುಮಾರ್, ನನಗೆ ನನ್ನಮ್ಮ ಯಾವಾಗಲೂ ಕನಸಲ್ಲಿ ಕಾಣುತ್ತಿದ್ದರು ಮತ್ತು ಕರೆಯುತ್ತಿದ್ದರು. ಅದಕ್ಕೆ ನಾನು ಊರಿಗೆ ಬಂದು ಬಿಟ್ಟೆ. ಪತ್ನಿ ದಮಯಂತಿ ಮತ್ತು ಮಕ್ಕಳಿಗೆ ಕನ್ನಡ ಕಲಿಸ್ತೇನೆ. ಇಲ್ಲೇ ತಾಯಿ ತಂದೆ ಮತ್ತು ಸೋದರಿಯರ ಸೇವೆ ಮಾಡಿಕೊಂಡು ಇರುತ್ತೇನೆ ಎಂದರು.

ತಾಯಿ ಶಿವಮ್ಮ ಮಾತನಾಡಿ, ನನ್ನ ಮಗ ಇಷ್ಟು ವರ್ಷವಾದರೂ ಸುಳಿವು ಸಿಕ್ಕದ ಕಾರಣ ಇದ್ದ ಓರ್ವ ಮಗನನ್ನು ದೇವರು ಕರೆದುಕೊಂಡ ಎಂದುಕೊಂಡು ಹೆಣ್ಣು ಮಕ್ಕಳೇ ಎಲ್ಲವೂ ಎಂದುಕೊಂಡು ಜೀವನ ನಡೆಸ್ತಾ ಇದ್ದೆ. ಏನೋ ದೇವರು ಕೊನೆಗೂ ನನ್ ಮಗನಿಗೆ ಪುನರ್ ಜನ್ಮ ಕೊಟ್ಟು ನನ್ನಲ್ಲಿಗೆ ತಂದು ಬಿಟ್ಟ. ಇನ್ನು ಭಾಷೆ ಕಲಿಯುವವರೆಗೂ ನಾನು ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ಹೊಂದಿಕೊಂಡು ಹೋಗುತ್ತೇನೆ ಎಂದರು. ವಿಶೇಷ ವರದಿ: ಕೆ.ಎಸ್. ಮೂರ್ತಿ