ಮಡಿಕೇರಿ, ಫೆ. 25: ಕೊಡಗು ಪ್ರೆಸ್ಕ್ಲಬ್ ವತಿಯಿಂದ ಮಾರ್ಚ್ 22 ರಂದು, ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಮಡಿಕೇರಿಯಲ್ಲಿ ಏರ್ಪಡಿಸಿದೆ. ಇದೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯ ಪತ್ರಕರ್ತರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಮಂಗಳವಾರ ಪತ್ರಿಕಾ ಭವನದಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಿತು. ಪ್ರಕ್ರಿಯೆಗೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾರೈ ಚಾಲನೆ ನೀಡಿದರು.
ಒಟ್ಟು 92 ಮಂದಿ ಪತ್ರಕರ್ತರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ತಲಾ 13 ಆಟಗಾರರನ್ನೊಳಗೊಂಡ ಏಳು ತಂಡಗಳು ಸಜ್ಜಾಗಿವೆ. ಉಳಿದ ಒಬ್ಬಆಟಗಾರನನ್ನು ಲಾಟರಿ ಮೂಲಕ ಆಯ್ಕೆಯಾದ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ತಂಡಗಳ ಫ್ರಾಂಚೈಸಿಗಳು ಮತ್ತು ಕ್ಯಾಪ್ಟನ್ಗಳ ಹೆಸರು ಕ್ರಮವಾಗಿ ಹೀಗಿದೆ, ಚಿತ್ತಾರಟೈಗರ್ಸ್- ಸವಿತಾರೈ ಹಾಗೂ ವಿಜಯ್ ಹಾನಗಲ್, ರೈಸಿಂಗ್ ಸ್ಟಾರ್- ಹೆಚ್.ಕೆ. ಜಗದೀಶ್ ಹಾಗೂ ಆದಿತ್ಯ, ಬೆಂಕಿಚೆಂಡು- ಅಜೀಜ್ ಮತ್ತು ಮುಸ್ತಾಫ, ಟೀಮ್ ವೀವರ್ಸ್- ಮಂಜುನಾಥ್ ಮತ್ತು ಪಾರ್ಥಚಿಣ್ಣಪ್ಪ, ಕೂರ್ಗ್ ಮೌಂಟನ್ ಲಯನ್ಸ್- ತೇಜಸ್ ಪಾಪಯ್ಯ ಮತ್ತು ಮಂಜು ಸುವರ್ಣ, ಕಾವೇರಿ ಮಕ್ಕಳು- ಲೋಕೇಶ್ ಸಾಗರ್ ಮತ್ತು ಮುರುಳೀಧರ್, ಅಗ್ನಿ; ರೆಜಿತ್ಗುಹ್ಯ ಮತ್ತು ಪ್ರೇಮ್ಕುಮಾರ್.