ಚೆಟ್ಟಳ್ಳಿ, ಫೆ. 24: ಚೆಟ್ಟಳ್ಳಿ ಚೇರಳ ಶ್ರೀಭಗವತಿ ದೇವಾಲಯದ ವಾರ್ಷಿಕೋತ್ಸವವು ತಾ. 28 ರಿಂದ ಮಾರ್ಚ್ 1ರವರೆಗೆ ನೆರವೇರಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ತಾ. 25ರಂದುÀ (ಇಂದು) ಪೂರ್ವಾಹ್ನ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಊರಿನವರೆಲ್ಲ ಸೇರಿ ದೇವಾಲಯದಲ್ಲಿ ಬೊಳಕ್‍ಮರ ನಿಲ್ಲಿಸಿ ಹಬ್ಬ ಕಟ್ಟು ಹಾಕುವರು. ಮೂರು ದಿನ ದೇವಾಲಯದಲ್ಲಿ ಕೊಂಬಾಟ್ ನೆರವೇರಲಿದೆ. ತಾ. 28 ರಂದು ಪಟ್ಟಣಿ ಹಬ್ಬವಾಗಿದ್ದು, ಬನಕ್ಕೆ ಹೋಗಿ ದೇವರ ಭಂಡಾರವನ್ನು ತಕ್ಕರ ಮನೆಯಿಂದ ದೇವಾಲಯಕ್ಕೆ ತರುವುದು. ತಾ.29ರಂದು ಅಯ್ಯಪ್ಪ ಬನ. ಮಾರ್ಚ್ 1 ರಂದು ದೊಡ್ಡಹಬ್ಬ ನಡೆಯಲಿದೆ. ಅಪರಾಹ್ನ 3 ಗಂಟೆಗೆ ಊರಿನವರು ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ದೇವ ಭಂಡಾರವನ್ನು ತರುವುದು. ಭಗವತಿ ದೇವಿಗೆ ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಿ ಕೊಂಬಾಟ್ ನೃತ್ಯ, ದೇವರ ಪ್ರಸಾದ ವಿತರಣೆ ಊಟೋಪಚಾರದ ನಂತರ ದೇವರ ಭಂಡಾರವನ್ನು ತಕ್ಕರ ಮನೆಗೆ ಒಪ್ಪಿಸುವರೆಂದು ದೇವತಕ್ಕರಾದ ಚೇರಳತಮ್ಮಂಡ ಆನಂದ, ತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ತಿಳಿಸಿದ್ದಾರೆ.