ಮಡಿಕೇರಿ, ಫೆ. 23: 2018-19ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಯುವಜನ ಮೇಳ ತಾ. 29 ಮತ್ತು ಮಾರ್ಚ್ 1 ಹಾಗೂ 2 ರಂದು ಮಂಡ್ಯ ಜಿಲ್ಲೆಯ ಇಂಡುವಾಡು ಗ್ರಾಮದಲ್ಲಿ ನಡೆಯಲಿದೆ.

ಗಾಳಿಬೀಡುವಿನಲ್ಲಿ ನಡೆದ ಜಿಲ್ಲಾ ಯುವಜನ ಮೇಳದಲ್ಲಿ ಭಾಗವಹಿಸಿ ಗುಂಪು ಸ್ಪರ್ಧೆ ಪ್ರಥಮ ಹಾಗೂ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕೊಡಗು ಜಿಲ್ಲೆಯ ಯುವಕ -ಯುವತಿ ಮಂಡಳಿ ಸದಸ್ಯರು ಮೈಸೂರು ವಿಭಾಗ ಮಟ್ಟದಲ್ಲಿ ಪಾಲ್ಗೊಳ್ಳುವಂತೆ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗವಹಿಸುವ ತಂಡಗಳಿಗೆ ಬಸ್ ಪ್ರಯಾಣ ದರ ನೀಡಲಾಗುತ್ತದೆ. ಆಸಕ್ತರು 9481213920, ಪಿ.ಪಿ. ಸುಕುಮಾರ್ ಅಧ್ಯಕ್ಷರು ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು ಮಡಿಕೇರಿ ಇವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.