ಮಡಿಕೇರಿ, ಫೆ. 23: ಕುಡಿದ ಮತ್ತಿನಲ್ಲಿ ಪತಿ - ಪತ್ನಿಯ ನಡುವೆ ಕಲಹ ನಡೆದು ಕೊಲೆಯಲ್ಲಿ ಪರ್ಯವಸನಗೊಂಡಿರುವ ಕೃತ್ಯ ಕಾರ್ಮಾಡು ಸಮೀಪದ ಗಿರಜನ ಹಾಡಿಯಲ್ಲಿ ಸಂಭವಿಸಿದೆ. ಅಲ್ಲಿನ ಕೊಲ್ಲಿಹಾಡಿ ನಿವಾಸಿ; ಜೆ.ಕೆ. ಅಣ್ಣು ಎಂಬಾತ; ತನ್ನ ಪತ್ನಿ ಸುಶೀಲ (30)ಳನ್ನು ಬಡಿದು ಸಾಯಿಸಲು ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.ಬಳಿಕ ಜೀವನ್ಮರಣ ಸ್ಥಿತಿಯಲ್ಲಿದ್ದ

u ಐದನೇ ಪುಟಕ್ಕೆ ಆಕೆಯನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿರುವದಾಗಿ ತಿಳಿದು ಬಂದಿದೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.