ಮಡಿಕೇರಿ, ಫೆ. 23: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಸಂತೋಷಕೂಟ ಹಾಗೂ ವಾರ್ಷಿಕ ಮಹಾಸಭೆ ಏಪ್ರಿಲ್ 12 ರಂದು ನಡೆಯಲಿದೆ.
ಹಳೆ ವಿದ್ಯಾರ್ಥಿಗಳ ಸಂಘದ ಕಚೇರಿಯಲ್ಲಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮ ಆಯೋಜನೆ ಬಗ್ಗೆ ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ವಾರ್ಷಿಕ ಸುದ್ದಿ ಸಂಚಿಕೆ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂಬಂಧ ಹಳೆ ವಿದ್ಯಾರ್ಥಿಗಳಿಂದ ಕಿರು ಲೇಖನ (300 ಪದಗಳ ಮಿತಿ), ಕವನಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ತಾ. 29 ರೊಳಗೆ ಕಾಲೇಜು ಕಚೇರಿಗೆ ತಲುಪಿಸುವಂತೆ ಸಂಘದ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಅಥವಾ ವಾಟ್ಸ್‍ಆಪ್ ಮೂಲಕವೂ ಕಳುಹಿಸಬಹುದಾಗಿದ್ದು, ಸುದ್ದಿ ಸಂಚಿಕೆ ವಿಭಾಗ, ಫಿ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘ, ಫಿ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ 571201 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ವಾಟ್ಸ್‍ಆಪ್ ಮೂಲಕ ಕಳುಹಿಸುವವರು 9880778047 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ತಮ್ಮ ಸಂಪೂರ್ಣ ವಿಳಾಸ ಹಾಗೂ ಭಾವಚಿತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಸಭೆಯಲ್ಲಿ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ನಿರ್ದೇಶಕರಾದ ಬಲ್ಯಂಡ ಕೆ. ನಂಜಪ್ಪ, ಕಿಶೋರ್ ರೈ, ಬಿದ್ದಂಡ ಕಾವೇರಿ ನಂಜಪ್ಪ ಇದ್ದರು.