ಮಡಿಕೇರಿ, ಫೆ. 23: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಕುಮಾನಿಯಲ್ಲಿ ಮೂರನೇ ಶನಿವಾರ ಬ್ಯಾಗ್ ರಹಿತ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಮಕ್ಕಳಿಂದಲೇ ಸಂತೆ ನಡೆಸಲಾಯಿತು.

ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಗದ್ದೆ, ಹೊಲದಲ್ಲಿ ಬೆಳೆಸಿದ ತರಕಾರಿ, ಸೊಪ್ಪು, ಹಣ್ಣುಗಳನ್ನು ತಂದು ಮಾರಾಟ ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಿ.ಬಿ. ಸರಸ್ವತಿ, ಸಿ.ಆರ್.ಪಿ.ಗಳಾದ ಸೌಮ್ಯ ಶೆಟ್ಟಿ, ಸುರೇಶ್, ಬಿ.ಆರ್.ಪಿ.ಗಳಾದ ಕೆ.ಯು. ರಂಜಿತ್, ಜಯಮ್ಮ ಶಾಲಾ ಸಮಿತಿ ಅಧ್ಯಕ್ಷ ಕೆ.ವಿ. ರಮೇಶ್, ಪೋಷಕವರ್ಗ, ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿಗಳು ಹಾಜರಿದ್ದು, ಎಲ್ಲರೂ ತರಕಾರಿ ಖರೀದಿಸಿದರು. ಕಾರ್ಯಕ್ರಮವು ಮಕ್ಕಳಲ್ಲಿ ಹಣದ ವ್ಯಾವಹಾರಿಕ ಜ್ಞಾನವನ್ನು ಪ್ರತ್ಯಕ್ಷ ಅನುಭವದಿಂದ ಪಡೆಯಲು ಸಾಕ್ಷಿಯಾಗಿತ್ತು.