ಹೆಬ್ಬಾಲೆ, ಫೆ. 23: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಫಲಾನುಭವಿಗಳಿಗೆ ಹಾಗೂ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಕೃಷಿ ಹಾಗೂ ಇನ್ನಿತರ ಸಾಲ ಯೋಜನೆ ಬಗ್ಗೆ ಹೆಬ್ಬಾಲೆ ಕೆನರಾ ಬ್ಯಾಂಕ್ ವತಿಯಿಂದ ಜಾಗೃತಿ ಮೂಡಿಸಲಾಯಿತು.

ಬ್ಯಾಂಕಿನ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಜಿ. ರಾಜ್‍ಕುಮಾರ್ ಮಾತನಾಡಿ, ಬೆಳೆ ಸಾಲದ ಜೊತೆಗೆ ಪ್ರಧಾನಮಂತ್ರಿ ಜೀವ ವಿಮಾ ಯೋಜನೆ, ಅಪಘಾತ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತಿತರ ಆಕರ್ಷಕ ಸೇವೆಗಳು ಲಭ್ಯವಿದೆ.

ಈ ಸೌಲಭ್ಯಗಳನ್ನು ಪಡೆದುಕೊಳ್ಳಲು 2 ಪಾಸ್ ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್ ಪ್ರತಿ, ಪಾಣಿ, ಕಂದಾಯ ರಶೀದಿಗಳನ್ನು ಸಲ್ಲಿಸಬೇಕು ಎಂದರು. ರೈತ ಮುಖಂಡರು, ಸ್ವಸಹಾಯ ಗುಂಪಿನ ಪದಾಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಇದ್ದರು.