ಸಿದ್ದಾಪುರ, ಫೆ. 22: ಸಿದ್ದಾಪುರದ ಶ್ರೀ ಮುತ್ತಪ್ಪ ಭಗವತಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ತಾ. 24 ರಿಂದ ತಾ. 28 ರವರೆಗೆ ನಡೆಯಲಿದೆ
ತಾ. 24 ರಂದು ಬೆಳಿಗ್ಗೆ 6.30 ಕ್ಕೆ ಪಂಚಗವ್ಯ ಪುಣ್ಯಾಹ, 6.30 ಗಂಟೆಗೆ ಗಣಪತಿ ಹೋಮ, 10.00 ಕ್ಕೆ ದ್ವಜಾರೋಹಣ, 10.30 ರಿಂದ 11.30 ರವರೆಗೆ ದೀಪಾರಾಧನೆ, 1 ಗಂಟೆಗೆ ಮಹಾಪೂಜೆ, ತೀರ್ಥ ಪ್ರಸಾದ, ಸಂಜೆ 6.51 ಕ್ಕೆ ಸಂಧ್ಯಾದೀಪ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.
ತಾ. 25 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 8.30 ರಿಂದ ಚಂಡಿಕಾ ಹೋಮ, 12.30 ಕ್ಕೆ ಮಹಾಪೂಜೆ, ತೀರ್ಥಪ್ರಸಾದ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೇವರ ಬಲಿ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.
ತಾ. 26 ರಂದು ಬೆಳಿಗ್ಗೆ 6.30 ಗಂಟೆಗೆ ಗಣಪತಿ ಹೋಮ, 8 ರಿಂದ 12 ರವರೆಗೆ ದುರ್ಗಾಪೂಜೆ, ಆಶ್ಲೇಷಬಲಿ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5.30 ಕ್ಕೆ ಅಲಂಕೃತ ಮಂಟಪದಲ್ಲಿ ಕಾವೇರಿ ನದಿಯಲ್ಲಿ ದೇವಿಯ ಸ್ನಾನ, 9 ಗಂಟೆಗೆ ದೇವಿಯ ನರ್ತನ, ರಾತ್ರಿ 9.30 ಕ್ಕೆ ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.