ಕೂಡಿಗೆ, ಫೆ. 22: ಕೂಡ್ಲೂರು ಗ್ರಾಮ ಸಮೀಪ ಕಾವೇರಿ ನದಿಯಲ್ಲಿ ಅಪರಿಚಿತ ಪುರುಷ ಶವ ಪತ್ತೆಯಾಗಿದೆ. ಕೂಡ್ಲೂರು ಕಾವೇರಿ ನದಿ ಮಧ್ಯ ಭಾಗದಲ್ಲಿ ಶವ ಇದ್ದುದ್ದನ್ನು ಕಂಡ ಸಮೀಪದ ಜಮೀನಿನವರು ಪೊಲೀಸ್ರಿಗೆ ಮಾಹಿತಿ ನೀಡಿದ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ವರ್ಗದವರು, ಅಗ್ನಿಶಾಮಕ ದಳದ ಬೋಟ್ ಮೂಲಕ ಶವವನ್ನು ದಡಕ್ಕೆ ಸಾಗಿಸಿದರು. ಮೃತ ದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ.