ಕೂಡಿಗೆ, ಫೆ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಎರಡನೇ ಹಂತದ ಗ್ರಾಮಸಭೆ ತಾ. 27 ರಂದು ಸಂತೆ ಮಾರುಕಟ್ಟೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. 24 ರಂದು 11 ಗಂಟೆಗೆ ಕೂಡ್ಲೂರು ವಾರ್ಡ್ ಸಭೆಯು ಬಸವೇಶ್ವರ ದೇವಾಲಯದಲ್ಲಿ ನವಗ್ರಾಮ ಮತ್ತು ಸುಂದರನಗರದ ವಾರ್ಡ್ ಸಭೆಯು 3 ಗಂಟೆಗೆ ನವಗ್ರಾಮ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ತಾ. 25 ರಂದು 11 ಗಂಟೆಗೆ ಹುಲುಗುಂದ ವಾರ್ಡ್ ಸಭೆಯು ಅಂಗನವಾಡಿ ಕೇಂದ್ರದಲ್ಲಿ ಮತ್ತು 3 ಗಂಟೆಗೆ ದೊಡ್ಡತ್ತೂರು ವಾರ್ಡ್ ಸಭೆಯು ಚಿಕ್ಕತ್ತೂರು ಸಮುದಾಯ ಭವನದಲ್ಲಿ ನಡೆಯಲಿವೆ. ತಾ. 26 ರಂದು 11 ಗಂಟೆಗೆ ಬಸವನತ್ತೂರು, ಕೂಡುಮಂಗಳೂರು ಮತ್ತು ವಿಜಯನಗರ ವಾರ್ಡ್‍ಸಭೆಯು ಕೂಡುಮಂಗಳೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.