ಮಡಿಕೇರಿ, ಫೆ. 20: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬೋಯಿಕೇರಿಯ ಹುಸೇನ್ ಎಂಬವರಿಗೆ ನಗರದ ಮಾರುಕಟ್ಟೆ ಸಂತೆ ವ್ಯಾಪಾರಿಗಳ ಹಿತರಕ್ಷಣಾ ವೇದಿಕೆಯಿಂದ ರೂ. 12,505 ಸಹಾಯಧನವನ್ನು ಚೆಕ್ ರೂಪದಲ್ಲಿ ಹಸ್ತಾಂತರಿಸಲಾಯಿತು. ಮಾರುಕಟ್ಟೆ ವ್ಯಾಪಾರಸ್ಥರಿಂದ ಹಾಗೂ ಸಂಘದ ಸದಸ್ಯರಿಂದ ಸಂಗ್ರಹಿಸಲಾದ ಹಣವನ್ನು ನಗರದ ಮಾರುಕಟ್ಟೆಯಲ್ಲಿರುವ ಸಂಘದ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭ ವೇದಿಕೆಯ ಅಧ್ಯಕ್ಷ ಎಂ.ಎಂ. ಇಸ್ಮಾಯಿಲ್, ಕಾರ್ಯದರ್ಶಿ ಎಂ.ಎ. ರಜಾಕ್, ಸಹ ಕಾರ್ಯದರ್ಶಿ ಎಂ.ಎ. ಮಹಮ್ಮದ್ ಆಲಿ, ಹಿರಿಯರಾದ ಎಂ.ಬಿ. ಷರೀಫ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವ್ಯಾಪಾರಸ್ಥರು ಇದ್ದರು.