ಚೆಟ್ಟಳ್ಳಿ, ಫೆ. 20: ಹೊಸತೋಟ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಹೊಸತೋಟ ಮಸೀದಿ ಮುಂಭಾಗದಲ್ಲಿ ಸಂವಿಧಾನ ರಕ್ಷಿಸಿ, ಸಂವಿಧಾನ ಉಳಿಸಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಹಲ್ ಖತೀಬರಾದ ಅಬೂಬಕರ್ ಮದನಿ, ಎಸ್.ವೈ.ಎಸ್. ಶಾಖಾ ಅಧ್ಯಕ್ಷ ಮೊಹಮ್ಮದ್ ಕುಟ್ಟಿ, ಜಮಾಹತ್ ಅಧ್ಯಕ್ಷ ಸೈದು ಹಾಜಿ, ಎಸ್.ಎಸ್.ಎಫ್ ಯೂನಿಟ್ ಉಪಾಧ್ಯಕ್ಷ ರಿಯಾಕ್ ಸಹದಿ, ಜಮಾಹತ್ ಸದಸ್ಯರಾದ ಖಾಲಿದ್, ಸ್ವಲಾತ್ ಕಮಿಟಿ ಅಧ್ಯಕ್ಷ ರಶೀದ್, ಬಶೀರ್, ಶಫೀಕ್, ಇರ್ಷಾದ್, ಖಾದರ್, ಹಂಸ, ಸಿದ್ದೀಖ್, ಕರೀಮ್, ಸಲೀಂ ಮತ್ತಿತರರು ಇದ್ದರು.