ಮಡಿಕೇರಿ, ಫೆ. 19: ಪೊನ್ನಂಪೇಟೆ ಹೋಬಳಿ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ. ಶೆಟ್ಟಿಗೇರಿ ಗ್ರಾಮದ ಪೈಸಾರಿ ಸ.ನಂ. 37/26 ರಲ್ಲಿ ಅಂದಾಜು 8 ರಿಂದ 10 ಎಕರೆ ಜಮೀನನ್ನು ಸರ್ವೆ ಮಾಡಲಾಗುತ್ತಿದ್ದು, ಪುನರ್ ವಸತಿಗಾಗಿ ಉಪ ವಿಭಾಗಾಧಿಕಾರಿ ಅವರು ಮತ್ತು ವೀರಾಜಪೇಟೆ ತಹಶೀಲ್ದಾರ್ ಮಹೇಶ್ ಅವರ ನೇತೃತ್ವದಲ್ಲಿ ಪೊನ್ನಂಪೇಟೆ ಹೋಬಳಿಯ ಕಂದಾಯ ಪರಿವೀಕ್ಷಕರು ಮತ್ತು ಸಿಬ್ಬಂದಿಗಳು ಒತ್ತುವರಿ ತೆರವು ಮಾಡಿ ಜೆ.ಸಿ.ಬಿ. ಮುಖಾಂತರ ನೆಲ ಸಮತಟ್ಟು ಮಾಡಲಾಯಿತು.