ಸೋಮವಾರಪೇಟೆ, ಫೆ. 20: ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ವಿ.ಎ. ಲಾರೆನ್ಸ್ ಆಯ್ಕೆಯಾಗಿದ್ದಾರೆ.

ಪಟ್ಟಣದಲ್ಲಿನ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆದು ಸಂಘದ ಅಧ್ಯಕ್ಷರಾಗಿ ವಿ.ಎ. ಲಾರೆನ್ಸ್, ಉಪಾಧ್ಯಕ್ಷರಾಗಿ ಓ.ಎಂ. ಸಂತೋಷ್‍ಕುಮಾರ್, ಕಾರ್ಯದರ್ಶಿಯಾಗಿ ಎನ್.ಡಿ. ವಿನೋದ್‍ಕುಮಾರ್ ಅವರುಗಳು ಆಯ್ಕೆಯಾದರು.