ಸಿದ್ದಾಪುರ, ಫೆ. 19: ಮಾಲ್ದಾರೆಯ ಬಾಡಗ ಬಾಣಂಗಾಲ ಗ್ರಾಮ ಸಮೀಪದ ಮೈಲಾಪುರ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ತಾ. 21 ರಂದು ಶ್ರೀ ಮಹಾ ಶಿವರಾತ್ರಿ ಮಹೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 10 ರಿಂದ 11 ಗಂಟೆಗೆ ಗಂಗೆ ಪೂಜೆ. ಹಾಗೂ 11 ಗÀಂಟೆಯಿಂದ 2 ಗÀಂಟೆಯವರೆಗೆ ಮುತ್ತೂರಿನ ವೆಂಕಟಯ್ಯ, ಚಲುವಯ್ಯ ಮತ್ತು ತಂಡದ ಕೊಂಬು, ನಗಾರಿ, ತಮಟೆ, ಹಾಗೂ ಕೊಡಗಿನ ವಾದ್ಯಗೋಷ್ಠಿ, ಹರೀಶ್ ಮತ್ತು ತಂಡದವರಿಂದ ಚೆನ್ನಯ್ಯನಕೋಟೆ ನಾಗಸ್ವರ, ಆರ್.ಎಕ್ಸ್ಬಾಸ್ಸ್ ಹುಣಸೂರು ತಂಡದಿಂದ ಡೊಳ್ಳು ನಗಾರಿ ಕುಣಿತ ನಡೆಯಲಿದೆ.
ಶ್ರೀ ಸಿದ್ದಪ್ಪಾಜಿ ಮತ್ತು ದೊಡ್ಡಮ್ಮ ತಾಯಿಯ ಮೆರವಣಿಗೆ ಮಧ್ಯಾಹ್ನ 1 ಘಂಟೆಗೆ ಪ್ರಸಾದ ವಿನಿಯೋಗ. ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಶಾಸಕ ಕೆ.ಜಿ. ಬೋಪಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ನೆಲ್ಲೀರ ಚರಣ್, ತಾಲ್ಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ಟಿ.ಎ. ರಾಣಿ, ಗ್ರಾ.ಪಂ. ಸದಸ್ಯರುಗಳಾದ ಎ.ಎ. ರಘು, ಟಿ.ಆರ್. ಸತೀಶ್ ಹಾಗೂ ಕಾಫಿ ಬೆಳೆಗಾರರಾದ ಎ.ಜಿ. ಪೂವಣ್ಣ ಭಾಗವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ 9.30 ರಿಂದ ಝೆಂಕಾರ್ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.