ಮಡಿಕೇರಿ, ಫೆ. 19: ಕಡಗದಾಳು ಗ್ರಾಮದಲ್ಲಿರುವ ಪ್ರಕೃತಿದತ್ತ ದೇವಾಲಯವಾದ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ವಾರ್ಷಿಕ ಮಹಾಪೂಜೆ ತಾ. 21 ಮತ್ತು 22 ರಂದು ನಡೆಯಲಿದೆ.
ತಾ. 21 ರಂದು ರಾತ್ರಿ ಜಾಗರಣೆ ಹಾಗೂ ಬಿಲ್ವಪತ್ರೆ ಅರ್ಚನೆ, ಎಳೆನೀರು ಅಭಿಷೇಕ ಸೇರಿದಂತೆ ಹಲವು ಪೂಜಾಕೈಂಕರ್ಯ ನಡೆಯಲಿದೆ. ತಾ. 22 ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭಗೊಂಡು ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಊರಿನವರ ಮತ್ತು ಸರ್ವ ಭಕ್ತಾಭಿಮಾನಿಗಳ ಸಹಕಾರದಿಂದ ಅನ್ನದಾನ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.