ಮಡಿಕೇರಿ, ಫೆ. 19: ಮೆಡ್ರಾಸ್ ಕ್ರಿಕೆಟ್ ತಂಡದ ನಾಯಕರಾಗಿ ಈ ಹಿಂದೆ ಸಾಧನೆ ತೋರಿದ್ದ ಕೊಡಗಿನ ಆಟಗಾರ ಪಟ್ಟಮಾಡ ಕೆ. ಬೆಳ್ಯಪ್ಪ (80) ಅವರು ತಾ. 19 ರಂದು ನಿಧನರಾದರು. ಮೂಲತಃ ಸಿದ್ದಾಪುರ ಬಾಡಗ-ಬಾಣಂಗಾಲದ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿದ್ದ ಮಾಜಿ ಕ್ರಿಕೆಟಿಗ ಬೆಳ್ಯಪ್ಪ ಅವರ ಅಂತ್ಯಕ್ರಿಯೆ ತಾ. 20 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ.