ಮಡಿಕೇರಿ, ಫೆ.18: ಜಿಲ್ಲೆಯಲ್ಲಿ ಮೊದಲ ಹಂತದ ಪರಿಶೀಲನಾ ಸಂದರ್ಭದಲ್ಲಿ 350 ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಅನಧಿಕೃತ ಹೋಂ ಸ್ಟೇಗಳ ಮಾಲೀಕರು ಒಂದು ತಿಂಗಳ ಒಳಗೆ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಅನಧಿಕೃತ ಹೋಂ ಸ್ಟೇಗಳು ನೋಂದಣಿ ಮಾಡಿಕೊಳ್ಳುವಂತೆ ಸಾಕಷ್ಟು ಬಾರಿ ಅವಕಾಶ ನೀಡಲಾಗಿತ್ತು, ಆದರೆ ಕೆಲವರು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹಲವರು ನೋಂದಣಿಮಾಡಿಕೊಳ್ಳಬೇಕಿದೆ. ಆ ದಿಸೆಯಲ್ಲಿ ಒಂದು ತಿಂಗಳ ಕಾಲ ಅವಕಾಶ ನೀಡಿದ್ದು, ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಮೊದಲ ಹಂತದ ಹೋಂ ಸ್ಟೇ ಪರಿಶೀಲನಾ ಸಂದರ್ಭದಲ್ಲಿ 350 ಅನಧಿಕೃತ ಹೋಂ ಸ್ಟೇಗಳು ಕಂಡು ಬಂದಿದ್ದು, ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಹೇಳಿದರು. ಮಾರ್ಚ್ 20 ರೊಳಗೆ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ವಿಶೇಷ ತನಿಖಾ ತಂಡವು ನಿಯಮಾನುಸಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಮಾತನಾಡಿ ಹೋಂ-ಸ್ಟೇ ನಡೆಸುತ್ತಿರುವ ಮಾಲೀಕರು 2015-20ರ ಪ್ರವಾಸೋದ್ಯಮ ನೀತಿಯ ಮಾರ್ಗಸೂಚಿಗಳ ಅನ್ವಯ ಪ್ರವಾಸೋದ್ಯಮ ಇಲಾಖೆಯ ಅಂತರ್ಜಾಲ ವಿಳಾಸ hಣಣಠಿ://ಞಚಿಡಿಟಿಚಿಣಚಿಞಚಿಣouಡಿism.oಡಿg ಅಥವಾ hಣಣಠಿs://ಞoಜಚಿgu.ಟಿiಛಿ.iಟಿ ಅಥವಾ hಣಣಠಿ://ಣಚಿಥಿಜಿ.iಟಿ/hs ರಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕಿದೆ ಎಂದರು.
ಆದರೆ ಕೆಲವು ಹೋಂಸ್ಟೇಗಳ ಮಾಲೀಕರು ಕೇವಲ ಗ್ರಾಮ ಪಂಚಾಯತ್ಗಳಲ್ಲಿ ನಿರಾಕ್ಷೇಪಣಾ ಪತ್ರಗಳನ್ನು ಪಡೆದು ಹಾಗೂ ಯಾವುದೇ ರೀತಿಯ ನಿರಾಕ್ಷೇಪಣಾ ಪತ್ರ, ದಾಖಲಾತಿ, ಪರವಾನಿಗೆ ಇಲ್ಲದೇ ಹಾಗೂ ಬಾಡಿಗೆ ಆಧಾರದ ಮೇಲೆ ಹೋಂ-ಸ್ಟೇಗಳನ್ನು ನಡೆಸುತ್ತಿರುವುದು ಕಂಡುಬಂದಿದೆ ಎಂದರು.
ಕಂದಾಯ ಸಚಿವರು ಹೋಂಸ್ಟೇಗಳ ಕಾರ್ಯ ನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಯಾವುದೇ ದಾಖಲಾತಿ, ಪರವಾನಿಗೆಗಳಿಲ್ಲದೇ ನಡೆಸುತ್ತಿರುವ ಹೋಂಸ್ಟೇಗಳ ಮೇಲೆ ಕಾನೂನಿನ ರೀತ್ಯ ಕ್ರಮವಹಿಸಲು ಸೂಚಿಸಿದ್ದು, ಜಿಲ್ಲಾಡಳಿತವು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಹಲವಾರು ಬಾರಿ ಸೂಚಿಸಿದರೂ ಕೂಡ ನೋಂದಣಿ ಮಾಡದೇ ಹೋಂಸ್ಟೇ ನಡೆಸುತ್ತಿದ್ದಾರೆ ಎಂದರು.
ಹೋಂ ಸ್ಟೇ ನೋಂದಣಿಯನ್ನು ಮಾರ್ಚ್ 20 ರೊಳಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಆನ್ಲೈನ್ ಮೂಲಕ ಮಾಡುವುದು, ಇಲ್ಲವಾದಲ್ಲಿ ನೋಂದಾಣಿಯಾಗದೇ ಇರುವಂತಹ ಎಲ್ಲಾ ಹೋಂಸ್ಟೇಗಳನ್ನು ಅನಧಿಕೃತ ವೆಂದು ಪರಿಗಣಿಸಿ ಕಂದಾಯ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿದ್ದು ಬೀಗ ಮುದ್ರೆ ಹಾಕಲು ಹಾಗೂ ನಿಯಾಮಾನುಸಾರ ಕ್ರಮ ಕೈಗೊಳ್ಳಲು ತೀರ್ಮಾನಿಸಿರುತ್ತದೆ.
(ಮೊದಲ ಪುಟದಿಂದ)
ಪ್ರಾಥಮಿಕ ವರದಿಯ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 210, ಸೋಮವಾರಪೇಟೆ ತಾಲೂಕಿನಲ್ಲಿ 83, ವೀರಾಜಪೇಟೆ ತಾಲೂಕಿನಲ್ಲಿ 116 ಹೋಂ-ಸ್ಟೇಗಳು ಇಲಾಖೆಯಲ್ಲಿ ನೋಂದಣಿಯಾಗದೆ ಅನಧಿಕೃತ ವಾಗಿರುವುದು ತಿಳಿದು ಬಂದಿರುತ್ತದೆ. ಇವುಗಳಲ್ಲದೇ ಮಾಹಿತಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವಂತಹ ಹೋಂ-ಸ್ಟೇಗಳ ಬಗ್ಗೆ ಸಾರ್ವಜನಿಕರು ದೂರು, ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮೂಲಕ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ:08272-228580 ಅಥವಾ ಈ-ಮೇಲ್ : ಚಿಜಞoಜಚಿguಣouಡಿism@gmಚಿiಟ.ಛಿom ಗೆ ತಿಳಿಸಬಹುದು ಎಂದು ರಾಘವೇಂದ್ರ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಚೇತನ್, ಸಮಿತಿ ಸದಸ್ಯರು, ಇತರರು ಇದ್ದರು.