ಮಡಿಕೇರಿ, ಫೆ. 18: ಅರಂತೋಡು ತೆಕ್ಕಿಲ್ ಹೆಚ್.ಪಿ. ಗ್ಯಾಸ್ ಏಜೆನ್ಸಿ ವತಿಯಿಂದ ಅರಂತೋಡು ಗ್ರಾಮ ಪಂಚಾಯಿತಿ ಹಾಗೂ ಅಕ್ಷಯ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಕೇಂದ್ರ ಸರಕಾರದ “ಇಂಧನವನ್ನು ಮಿತವಾಗಿ ಬಳಸೋಣ ಬನ್ನಿ ಪರಿಸರವನ್ನು ಸಂರಕ್ಷಿಸೋಣ” ಎಂಬ ಸಂದೇಶದೊಂದಿಗೆ ಸಕ್ಷಮ್ ಎಲ್.ಪಿ.ಜಿ. ಪಂಚಾಯಿತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ತೆಕ್ಕಿಲ್ ಹೆಚ್.ಪಿ. ಗ್ಯಾಸ್ನ ವ್ಯವಸ್ಥಾಪಕ ಅಶ್ರಫ್ ಗುಂಡಿ ಮಾತನಾಡಿ, ಜನರಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವ್ಯರ್ಥ ಬಳಕೆ ಮಾಡದಂತೆ ಜಾಗೃತಿ ಮೂಡಿಸಿದರಲ್ಲದೇ, ಪ್ರತಿಜ್ಞೆ ವಿಧಿ ಬೋಧಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಅಕ್ಷಯ ಸ್ತ್ರೀ ಗೊಂಚಲು ಸಮಿತಿ ಅಧ್ಯಕ್ಷೆ ಗಾಯತ್ರಿ ಉಳುವಾರು, ಅನ್ವಾರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ, ಮಜೀದ್ ಗ್ರಾ.ಪಂ. ಸದಸ್ಯೆ ದೇವಕಿ ಕೋಡಿ, ಅರಂತೋಡು ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ, ಬಿಳಿಯಾರ್ ಅಂಗನವಾಡಿ ಕಾರ್ಯಕರ್ತೆ ಲಲಿತಾ ಜಯಲಕ್ಮೀ, ದೇರಾಜೆ ಅಂಗನವಾಡಿ ಕಾರ್ಯಕರ್ತೆ ಕುಸುಮ, ಕಳುಬ್ಯೆಲು ಅಂಗನವಾಡಿ ಕಾರ್ಯಕರ್ತೆ ಧನಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.