ಮಡಿಕೇರಿ, ಫೆ. 17: ಕಡಿಯತ್ತೂರು ಗ್ರಾಮದ ಶ್ರೀ ಶಾಸ್ತಾವು, ಭಗವತಿ, ಅಯ್ಯಪ್ಪ ದೇವರ ವಾರ್ಷಿಕ ಹಬ್ಬ ತಾ. 20 ರಿಂದ 22 ರವರೆಗೆ ನಡೆಯಲಿದೆ.
ತಾ. 20 ರಂದು ಪೂರ್ವಾಹ್ನ ಎತ್ತುಪೋರಾಟ, ಸಂಜೆ ಶ್ರೀ ಶಾಸ್ತಾವು, ಭಗವತಿ, ಅಯ್ಯಪ್ಪ ದೇವರ ಮುಡಿತೆರೆ ಉತ್ಸವ, ತಾ. 21 ರಂದು ರಾತ್ರಿ ವಿವಿಧ ಕೋಲಗಳ ಉತ್ಸವ, ಮೇಲೇರಿ ಅಗ್ನಿಸ್ಪರ್ಶ ಮತ್ತು ತಾ. 22 ರಂದು ಪೂರ್ವಾಹ್ನ ಅಜ್ಜಪ್ಪತೆರೆ ಹಾಗೂ ಶ್ರೀ ಚಾಮುಂಡಿ ದೇವರ ಮೇಲೇರಿ ಉತ್ಸವ ನಡೆಯಲಿದೆ. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.