ಶ್ರೀಮಂಗಲ, ಫೆ. 17: ವೀರಾಜಪೇಟೆ ತಾಲೂಕು ತೆರಾಲು ಗ್ರಾಮದಲ್ಲಿ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಕಾರ್ಮಿಕ ಮುಳುಗುತ್ತಿದ್ದದ್ದನ್ನು ಗಮನಿಸಿ ರಕ್ಷಣೆಗೆ ತೆರಳಿದ ಮತ್ತೊಂದು ಕಾರ್ಮಿಕ ಕೂಡ ಮುಳುಗಿರುವ ಘಟನೆ ಸಂಭವಿಸಿದೆ.ಇಂದು ಮಧ್ಯಾಹ್ನ ವೇಳೆ ಗ್ರಾಮದ ಬೆಳೆಗಾರ ಬೊಳ್ಳೇರ ಪೊನ್ನಪ್ಪ ಅವರ ತೋಟದಲ್ಲಿದ್ದ ಈಶಾನ್ಯ ಭಾರತ ಮೂಲದ ಕಾರ್ಮಿಕ ವಿನೋದ್ (22) ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮುಳುಗುತ್ತಿದ್ದುದ್ದನ್ನು ಗಮನಿಸಿ, ಅಲ್ಲಿಯೇ ಇದ್ದ ಇನ್ನೋರ್ವ ಕಾರ್ಮಿಕ ಪುಟ್ಟ (22) ಆತನ ರಕ್ಷಣೆಗೆ ಕೆರೆಗೆ ಇಳಿದಿದ್ದಾನೆ. ಆದರೆ ನೀರಿನಿಂದ ಹೊರ ಬರಲಾಗದೆ ಆತ ಕೂಡ ಮುಳುಗಿದ್ದಾನೆ.ಕಾರ್ಮಿಕ ಪುಟ್ಟ ವಿವಾಹಿತನಾಗಿದ್ದು, ವಿನೋದ್ ಅವಿವಾಹಿತ. ಕೆರೆಯಲ್ಲಿ ಮುಳುಗಿರುವವರ ಪತ್ತೆಗೆ ಸ್ಥಳೀಯ ಮುಳುಗು ತಜ್ಞರನ್ನು ಕರೆತರಲಾಗಿದೆ. ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ದಿನೇಶ್ ಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.