ಮಡಿಕೇರಿ, ಫೆ.17 : ಮಡಿಕೇರಿಯ ವೆಸ್ಟರ್ನ್ ಹಾಗೂ ಬ್ಯಾರಿ ವಾರಿಯರ್ಸ್ ವತಿಯಿಂದ ತಾ.29 ಹಾಗೂ ಮಾ.1 ಮತ್ತು 2ರಂದು ಎಂಪಿಎಲ್-2 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಂದ್ಯಾವಳಿ ಆಯೋಜಕ ಸಮಿತಿಯ ಎನ್.ಪಿ.ಹ್ಯಾರಿಸ್ ಅವರು, ಐಪಿಎಲ್ ಮಾದರಿಯ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದ್ದು, ತಾ.19ರ ಸಂಜೆ ನಗರದ ಹೊಟೇಲ್ ಸಮುದ್ರದಲ್ಲಿ ಫ್ರಾಂಚೈಸಿಗಳು ಆಟಗಾರರ ಆಯ್ಕೆ ಮಾಡಲಿದ್ದಾರೆ ಎಂದರು.

ಪಂದ್ಯಾವಳಿಯಲ್ಲಿ ಮಡಿಕೇರಿ ತಾಲೂಕಿನ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ವಿಜೇತ ತಂಡಕ್ಕೆ ರೂ.50 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ನಗದು ಜೊತೆಗೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರಶೀದ್ ರೆಹಮಾನ್, ಕಾರ್ಯದರ್ಶಿ ಕಬೀರ್, ಸದಸ್ಯರಾದ ಉಬೈದ್ ಹಾಗೂ ಶನ್ನಾ ಉಪಸ್ಥಿತರಿದ್ದರು.