ಸಿದ್ದಾಪುರ, ಫೆ. 17: ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರ ಅಹೋರಾತ್ರಿ ಪ್ರತಿಭಟನೆ 8 ದಿನಗಳನ್ನು ಪೂರೈಸಿದೆ.
ಕರಡಿಗೋಡು ಮತ್ತು ಗುಹ್ಯ ಭಾಗದ ಪ್ರವಾಹ ಸಂತ್ರಸ್ತರ ಹಾಗೂ ಬಾಳುಗೋಡು ನಿವೇಶನ ರಹಿತರ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿ ಕೊಡಗು ಬಂದ್ ಮಾಡುವುದಾಗಿ ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಸೋಮಪ್ಪ ಎಚ್ಚರಿಸಿದ್ದಾರೆ. ಗ್ರಾಮ ಪಂಚಾಯಿತಿ ಎದುರು ನಡೆಸುತ್ತಿರುವ ಅಹೋರಾತ್ರಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಈ ಸಂದರ್ಭ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಎನ್. ಮಣಿ, ತಾಲೂಕು ಸಂಚಾಲಕ ಸುಂದರ, ಪ್ರಮುಖರಾದ ಗಣೇಶ್, ಕುಮಾರ, ರಮೇಶ್, ದಿನೇಶ್, ಸೂರ್ಯ, ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಪ್ರೇಮಾ, ಪೂವಮ್ಮ, ದೇವಜಾನು ಸೇರಿದಂತೆ ಮತ್ತಿತರರು ಇದ್ದರು.