ಗೋಣಿಕೊಪ್ಪಲು, ಫೆ. 15: ಇರ್ಪು ಶ್ರೀರಾಮೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ವತಿಯಿಂದ ಇರ್ಪು ಶ್ರೀರಾಮೇಶ್ವರ ದೇವಾಲಯದ ಅಷ್ಟಬಂಧ ಮತ್ತು ಬ್ರಹ್ಮಕಲಶ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ನೀಲೇಶ್ವರದ ದಾಮೋದರ ತಂತ್ರಿಯವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮದ್ರೀರ ಪಿ. ವಿಷ್ಣು, ಗ್ರಾಮಸ್ಥರ ಸಮಿತಿ ಅಧ್ಯಕ್ಷ ತೀತಿರ ಮಂದಣ್ಣ, ಕಾರ್ಯದರ್ಶಿ ಗಳಾದ ಚೋಕಿರ ಹ್ಯಾರಿ ಮತ್ತು ಪಾರುಪತ್ಯೆದಾರರಾದÀ ಅಜ್ಜಮಾಡ ಅಣ್ಣಯ್ಯ ಮತ್ತಿತರ ಸದಸ್ಯರು ನೇತೃತ್ವ ವಹಿಸಿದ್ದರು.

ದೇವಾಲಯದ ಗರ್ಭಗುಡಿ ವೃತ್ತಾಕಾರದಲ್ಲಿ ಸುಂದರವಾಗಿ ನಿರ್ಮಾಣಗೊಂಡಿದೆ. ಒಳಪೌಳಿಯು ಪೂರ್ಣವಾಗಿ ಮರದ ಕೆತ್ತನೆ ಕೆಲಸಗಳಿಂದ ಕೂಡಿದ್ದು ಆಕರ್ಷಕವಾಗಿದೆ.

ಪೂರ್ಣ ದೇವಸ್ಥಾನವು ವಾಸ್ತುಶಿಲ್ಪ ಪ್ರಕಾರ, ಪುರಾತನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. 5 ದಿನಗಳ ಕಾಲ ನಡೆದ ಬ್ರಹ್ಮಕಲಶ ಉತ್ಸವದಲ್ಲಿ ಸ್ಥಳೀಯ ಮಾರ್ಗದರ್ಶಕ ಪನ್ಯ ಬಾಬು, ನಿರ್ದೇಶಕರಾದ ಮಚ್ಚಮಾಡ ಡಾಲಿ ಚಂಗಪ್ಪ, ಬಾಳೆಯಡ ಅಶೋಕ್, ಕುಞಂಗಡ ರಮೇಶ್, ಅಲ್ಲೇಟ್ಟೀರ ಮಾಚಯ್ಯ, ಅಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರ ಸಮಿತಿ ಪದಾಧಿಕಾರಿಗಳು, ಅರ್ಚಕರಾದ ನಾರಾಯಣ, ಪ್ರಾಣೇಶ, ಮುಜರಾಯಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.