ಸೋಮವಾರಪೇಟೆ, ಫೆ. 16: ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಕಂಪ್ಯೂಟರ್‍ನ್ನು ಉಚಿತವಾಗಿ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಶಾಂತಳ್ಳಿಯಂತಹ ಭಾಗದಲ್ಲಿರುವ ವಿದ್ಯಾರ್ಥಿಗಳೂ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಕಂಪ್ಯೂಟರ್ ಜ್ಞಾನ ಪಡೆಯಲಿ ಎಂಬ ಆಶಯದಿಂದ ಕಂಪ್ಯೂಟರ್ ನೀಡಲಾಗಿದೆ ಎಂದು ಅಭಿಪ್ರಾಯಿಸಿದರು. ಶಾಲೆಯ ಶಿಕ್ಷಕರುಗಳಾದ ಕೆ.ಪಿ. ತುಳಸಿ, ಸುಜಾತ ಕೆ.ಪಿ. ಅವರುಗಳ ಮೂಲಕ ರವೀಂದ್ರ ಅವರು ಕಂಪ್ಯೂಟರ್‍ನ್ನು ಹಸ್ತಾಂತರಿಸಿದರು.