ಪಾಲಿಬೆಟ್ಟ, ಫೆ. 16 : ಪಾಲಿಬೆಟ್ಟ ಸಮೀಪದ ಮಾಲ್ದಾರೆಯ ಮುಖ್ಯರಸ್ತೆಯ ಮುತ್ತಪ್ಪ ದೇವಸ್ಥಾನದ ಬಳಿ ರೂ. 70 ಲಕ್ಷದ ರಸ್ತೆ ಡಾಮರೀಕರಣಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ಹಂತ ಹಂತವಾಗಿ ರಸ್ತೆಯ ದುರಸ್ತಿಯನ್ನು ಮಾಡುವುದಕ್ಕೆ ಅನುದಾನವನ್ನು ಸರಕಾರದಿಂದ ಹೆಚ್ಚಾಗಿ ತರುವುದಾಗಿ ಹೇಳಿದರು. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೆಲಸವನ್ನು ಮಾಡುವಂತೆಯು ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಜು ಸುಬ್ರಮಣಿ, ತಾಲ್ಲೂಕು ಪಂಚಾಯತ್ ಸದಸ್ಯ ಅಜಿತ್ ಕರುಂಬಯ್ಯ, ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಕರುಂಬಯ್ಯ,

ಮೇಕೇರಿರ ಅರುಣ್, ಗುತ್ತಿಗೆದಾರರಾದ ಕೊಕ್ಕಲೆಮಾಡ ತನು ತಿಮ್ಮಯ್ಯ, ಅಪ್ಪಂಡೇರಂಡ ದಿನು ಹಾಜರಿದ್ದರು.