ಮಡಿಕೇರಿ, ಫೆ. 15: ಮಡಿಕೇರಿಯಿಂದ ಸಂಪಾಜೆಯತ್ತ ತೆರಳುವ ಹೆದ್ದಾರಿಗೆ ಹೊಂದಿಕೊಡಂತೆ ದೇವರಕೊಲ್ಲಿ ಎಂಬ ಸ್ಥಳದಲ್ಲಿ ಬ್ರಿಟಿಷರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ವೊಂದು, ಇದೀಗ ಶಿಲಾಗುಡಿ ಯೊಂದಿಗೆ ಮರುಹುಟ್ಟು ಪಡೆದು ಕೊಳ್ಳುತ್ತಿದೆ. ಒಂದೊಮ್ಮೆ 18 ಎಕರೆ ದೇವರ ಕಾಡು ಸಹಿತ ಪ್ರಕೃತಿ ಸೌಂದರ್ಯದ ನಡುವೆ ನೆಲೆಸಿದ್ದ ಶ್ರೀ ಚಾಮುಂಡೇಶ್ವರಿ ದೇವಿ ಮದೆ, ಜೋಡುಪಾಲ, ಮೊಣ್ಣಂಗೇರಿ, ಕೊಯನಾಡು ಮುಂತಾದೆಡೆಯ ಗ್ರಾಮೀಣ ಜನತೆಯ ಆರಾಧ್ಯಳಾಗಿ ದ್ದಳೆಂದು ತಿಳಿದು ಬರುತ್ತದೆ.ಅಲ್ಲದೆ ಈ ದೇವಿಯ ಆರಾಧನೆಯೊಂದಿಗೆ ಸುಮಾರು 40ಕ್ಕೂ ಅಧಿಕ ಕುಡಿಯ ಜನಾಂಗದ ನಿವಾಸಿಗಳು ಅಲ್ಲಿ ವಾಸವಿದ್ದ ಕುರಿತು ತಿಳಿದು ಬಂದಿದೆ. ಬ್ರಿಟಿಷರು ದೇವಿಗೆ ಸಂಬಂಧಿಸಿದ ದೇವರಕಾಡು ಸೇರಿದಂತೆ ಬಹುತೇಕ ಅರಣ್ಯವನ್ನು ರಬ್ಬರ್ ತೋಟವಾಗಿ ಪರಿವರ್ತಿಸಿದ್ದು, ಕಾಲಚಕ್ರ ಉರುಳಿದಂತೆ ಅಲ್ಲಿನ ಮೂಲ ನಿವಾಸಿ ಕುಡಿಯ ಜನಾಂಗ ಕೂಡ ಸ್ಥಾನಪಲ್ಲಟಗೊಂಡಿರುವ ಬಗ್ಗೆ ತಿಳಿದು ಬರುತ್ತದೆ. ಪರಿಣಾಮ ಬೃಹತ್ ಸಂಪಿಗೆ ವೃಕ್ಷದಡಿ ನೆಲೆಸಿದ್ದ ದೇವಿಯ ಕ್ಷೇತ್ರ ಕಡೆಗಣಿಸಲ್ಪಟ್ಟಿದ್ದಾಗಿದೆ.ಅಷ್ಟಮಂಗಲ ಪ್ರಶ್ನೆಯಲ್ಲಿ ಲಭಿಸಿರುವ ಈ ಮಾಹಿತಿ ಮೇರೆಗೆ ದೇವರಕೊಲ್ಲಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು, ಅಲ್ಲೊಂದು ತಾತ್ಕಾಲಿಕ ಪುಟ್ಟ ಗುಡಿ ನಿರ್ಮಿಸಿಕೊಂಡು ಚಾಮುಂಡೇಶ್ವರಿಯನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಪೂಜಿಸುತ್ತಾ ಬಂದಿದ್ದಾರೆ. ಹಾಗೆಯೇ ಕಳೆದ 7 ವರ್ಷಗಳಿಂದ ಭಕ್ತರು ಸಮಿತಿ ಯೊಂದನ್ನು ರಚಿಸಿಕೊಂಡು ಗುಡಿ ನಿರ್ಮಾಣದ ಸಂಕಲ್ಪ ಕೈ ಗೊಂಡಿದ್ದಾರೆ. ಈ ದೇವಿ ಸನ್ನಿಧಿಯಿಂದ ಅನತಿ ದೂರದಲ್ಲಿ ಹೆಸರೇ ಸೂಚಿಸುವಂತೆ, ದೇವರ ಕೊಲ್ಲಿಯೊಳಗೆ ಆಕರ್ಷಣೀಯ ರೀತಿಯಲ್ಲಿ ದೇವಿಯ ಮಹಿಮೆ ಯೆಂಬಂತೆ ಮೀನುಗಳು ಗಮನ ಸೆಳೆಯುತ್ತವೆ. ಈ ಮೀನುಗಳು 2018ರ ಮಳೆಯ ತೀವ್ರತೆ ನಡುವೆ ಸಂಪೂರ್ಣ ಕಣ್ಮರೆಯಾಗಿದ್ದು, ಇದೀಗ ಮತ್ತೆ ಪವಾಡವೆಂಬಂತೆ ಅದೇ ಸ್ಥಳದಲ್ಲಿ ಮತ್ತೆ ಗೋಚರಿಸು ವುದರೊಂದಿಗೆ ಅಲ್ಲಿನ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಜಾಗ ವಿಸ್ತರಣೆ: ಅದೇ ರೀತಿ ಒಂದೊಮ್ಮೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರೂ ರಬ್ಬರ್ ತೋಟ ನಿರ್ವಹಿಸುತ್ತಿರುವ ನೀಲಂಬೂರು ಎಸ್ಟೇಟ್ ಮಂದಿ, ಈ ದೇಗುಲಕ್ಕೆ ಸೇರಿರುವ ಜಾಗ ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಈ ನಡುವೆ ಕಳೆದ ಮುಂಗಾರಿನಲ್ಲಿ