*ಗೋಣಿಕೊಪ್ಪಲು, ಫೆ. 15: 3 ಕೋಟಿ 50 ಲಕ್ಷ ಅನುದಾನದಲ್ಲಿ ಮಡಿಕೇರಿ ಕುಟ್ಟ ರಾಜ್ಯ ಹೆದ್ದಾರಿಯ ಪೆÇನ್ನಂಪೇಟೆ ಮುಖ್ಯ ರಸ್ತೆಯ 7 ಕಿ.ಮೀ ವ್ಯಾಪ್ತಿಯಲ್ಲಿ ಮರು ಡಾಂಬರೀಕರಣಕ್ಕೆ ಮತ್ತು ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ 86.80 ಲಕ್ಷÀ ಅನುದಾನದ ರಸ್ತೆ ಮತ್ತು ಮಳೆ ಹಾನಿ ದುರಸ್ತಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಮೂರುವರೆ ಕೋಟಿ ಅನುದಾನದಲ್ಲಿ ಮುಖ್ಯ ರಸ್ತೆ ಡಾಂಬರೀಕರಣ ಹಾಗೂ ಅರುವತ್ತೊಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಹಾನಿ ದುರಸ್ತಿಯಲ್ಲಿ 15 ಲಕ್ಷ ಅನುದಾನವನ್ನು ಬಳಸಿ ಕೊಂಡು ಕಾಡ್ಲಯ್ಯಪ್ಪ ದೇವಸ್ಥಾನದ ಮೂಲಕ ಕೈಕೇರಿ ಸಂಪರ್ಕ ಬೆಸೆಯುವ ರಸ್ತೆ ಡಾಂಬರೀಕರಣಕ್ಕೆ, 20 ಲಕ್ಷ ಅನುದಾನಲ್ಲಿ ಹಳ್ಳಿಗಟ್ಟು ಬೇಗೂರು ರಸ್ತೆ, ಅಭಿವೃದ್ಧಿ, 5 ಲಕ್ಷ ಅನುದಾನದಲ್ಲಿ ಕಾಡ್ಲಯ್ಯಪ್ಪ ದೇವಸ್ಥಾನದ ಮಳೆ ಹಾನಿ ದುರಸ್ತಿ ಯೋಜನೆಯಡಿ ತಡೆಗೋಡೆ ನಿರ್ಮಾಣ ನಡೆಯಲಿದೆ ಎಂದು ಮಾಹಿತಿ ನೀಡಿದರು.

14 ಲಕ್ಷ ಅನುದಾನದಲ್ಲಿ ಹಳ್ಳಿಗಟ್ಟು ಬೇಗೂರು ರಸ್ತೆಯ ಸೇತುವೆ ದುರಸ್ಥಿ ಕಾಮಗಾರಿ, 10 ಲಕ್ಷದಲ್ಲಿ ಕೈಕೇರಿ ಕಾಡ್ಯಮಾಡ ಐನ್‍ಮನೆ ಸಂಪರ್ಕ ರಸ್ತೆ ಅಭಿವೃದ್ಧಿ, 5 ಲಕ್ಷದಲ್ಲಿ ಹುದೂರು, ಮಾಪಿಳ್ಳೆತೋಡು ಸಂಪರ್ಕ ಡಾಂಬರು ರಸ್ತೆ ಕಾಮಗಾರಿ, 5 ಲಕ್ಷದಲ್ಲಿ ಮುಗುಟಗೇರಿ ಸಣ್ಣುವಂಡ, ಮನೆಯಪಂಡ ಮುದುರೆಪಾಲ ಸಂಪರ್ಕ ರಸ್ತೆ ಡಾಂಬರೀಕರಣ, 5 ಲಕ್ಷದಲ್ಲಿ ಬಿರಂಪಾರೆ ಕರ್ತಮಾಡ ಸಾರ್ವಜನಿಕ ಸಂಪರ್ಕ ರಸ್ತೆ, 3 ಲಕ್ಷದಲ್ಲಿ ಮಚ್ಚಿಯಂಡ ಐನ್‍ಮನೆ ರಸ್ತೆ, 4.80ಲಕ್ಷದಲ್ಲಿ ಮೈಸೂರಮ್ಮ ಕಾಲೋನಿ ಸಾರ್ವಜನಿಕ ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂದು ಶಾಸಕರು ತಿಳಿಸಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ, ಸದಸ್ಯರುಗಳಾದ ಮನೆಯಪಂಡ ಬೋಪಣ್ಣ, ರಾಜೇಶ್, ಪೆÇನ್ನಂಪೇಟೆ ಗ್ರಾ.ಪಂ. ಸದಸ್ಯ ಅಮ್ಮತೀರ ಸುರೇಶ್, ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟ್ಟೀರ ದರ್ಶನ್ ದೇವಯ್ಯ, ಸದಸ್ಯ ಕುಲ್ಲಚಂಡ ಚಿಣ್ಣಪ್ಪ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಕೆ.ಜಿ. ರಾಮಕೃಷ್ಣ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್ ಸೇರಿದಂತೆ ಮತ್ತಿತರರು ಹಾಜರಿದ್ದರು.