ಸಿದ್ದಾಪುರ, ಫೆ. 15: ಕಾಡ್ಗಿಚ್ಚು ಜಾಗೃತಿಪಡಿಸುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಡಿಕೇರಿ ಅರಣ್ಯ ಭವನದಿಂದ ನಾಗರಹೊಳೆಯವರೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಯಿತು. ಚೆಟ್ಟಳ್ಳಿ, ಸಿದ್ದಾಪುರ, ಪಾಲಿಬೆಟ್ಟ ಮಾರ್ಗವಾಗಿ ಜಾಥಾ ನಾಗರಹೊಳೆಗೆ ತೆರಳಿತು. ಮಡಿಕೇರಿ ಡಿ.ಸಿ.ಎಫ್. ಪ್ರಭಾಕರನ್, ವೀರಾಜಪೇಟೆ ಡಿ.ಸಿ.ಎಫ್. ಶಂಕರ ಹಾಗೂ ಅರಣ್ಯಾಧಿಕಾರಿಗಳು ಹಾಜರಿದ್ದರು.