ಕುಶಾಲನಗರ, ಫೆ. 15: ಕರ್ನಾಟಕ ಒಲಿಂಪಿಕ್ ಕಮಿಟಿ, ಯುವ ಸಬಲೀಕರಣ ಮತ್ತು ಯುವಜನ ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮಿನಿ ಒಲಿಂಪಿಕ್ ಕಬಡ್ಡಿ ಟೂರ್ನಿಯ 14 ವರ್ಷದೊಳಗಿನ ವಿಭಾಗದಲ್ಲಿ ಕುಶಾಲನಗರ ಜ್ಞಾನಭಾರತಿ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

ಸಿದ್ದಾಪುರದ ಶ್ರೀ ಕೃಷ್ಣಮಂದಿರ ಶಾಲೆ, ಕೂಡುಮಂಗಳೂರು ಸರಕಾರಿ ಪ್ರೌಢಶಾಲೆ, ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು ಫಾತಿಮ ಪ್ರೌಢಶಾಲೆಯ ಆಟಗಾರರ ತಂಡ ಪಾಲ್ಗೊಂಡಿದ್ದರು. ಜ್ಞಾನಭಾರತಿ ಶಾಲೆಯ ತರಬೇತುದಾರರಾಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್.ಎಸ್.ಉತ್ತಪ್ಪ ಕಾರ್ಯನಿರ್ವಹಿಸಿದ್ದಾರೆ.