ಮಡಿಕೇರಿ, ಫೆ. 15: ಕಳೆದ 15 ವರ್ಷಗಳಿಂದ ಜಿಲ್ಲೆಯಲ್ಲಿ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ಉಚಿತ ಸಾಮೂಹಿಕ ವಿವಾಹ ನಡೆಸಿಕೊಡುತ್ತಿರುವ ಅಲ್ ಅಮೀನ್ ಜಿಲ್ಲಾ ಸಮಿತಿಯು ಈ ಬಾರಿಯೂ ಕೂಡ 25 ಹೆಣ್ಣುಮಕ್ಕಳ ವಿವಾಹ ನಡೆಸಿಕೊಡುವ ಗುರಿಯನ್ನು ಇರಿಸಿಕೊಂಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ರುವ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಧುವಿಗೆ 5 ಪವನ್ ಚಿನ್ನಾಭರಣ, ವಧೂ ವರರಿಗೆ ಹೊಸ ಉಡುಪು, ಹಾಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸರ್ವರಿಗೂ ಭೋಜನ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಏಪ್ರಿಲ್ 19 ರಂದು ಈ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ, ಬಡತನ ರೇಖೆಗಿಂತ ಕೆಳಗಿರುವ 18 ವರ್ಷ ತುಂಬಿರುವವರು ಈ ಕೆಳಕಂಡ ಊರುಗಳಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಮಾರ್ಚ್ 25ರ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಅಲ್ ಅಮೀನ್ ಕಚೇರಿಗೆ ತಲುಪಿಸುವಂತೆ ಕೋರಲಾಗಿದೆ.

ಅರ್ಜಿ ನಮೂನೆ ದೊರೆಯುವ ಊರುಗಳು

ಮಡಿಕೇರಿ: ಫೈವ್ ಸ್ಟಾರ್ ವಾಚ್ ವಕ್ರ್ಸ್ ಕಾರು ನಿಲ್ದಾಣ ಮೊ. 9844534743. ಸೋಮವಾರಪೇಟೆ: ವಾಕ್ ಅಂಡ್ ವೇರ್ ಶೂ ಶಾಪ್ ಮೊ. 9448585556. ಕುಶಾಲನಗರ: ರಿಹಾನಾ ಕ್ಯಾಂಟೀನ್ ಹಿಲಾಲ್ ಮಸೀದಿ ಸಮೀಪ ಮೊ. 9008737340. ಸುಂಟಿಕೊಪ್ಪ: ಆರ್. ಹಸನ್ ಕುಞÂ ಹಾಜಿ ಕೆಇಬಿ ಹಿಂಭಾಗ ಮೊ. 9886863045. ನೆಲ್ಲಿಹುದಿಕೇರಿ: ಎ.ಕೆ. ಹಕೀಂ ಮೊ. 9448354568. ಗೋಣಿಕೊಪ್ಪಲು: ಬಸೀರ್ ಹಾಜಿ ಟೈಮ್ ವಿಜನ್ ಮೊ. 8289887668. ಕೊಡ್ಲಿಪೇಟೆ: ಸುಲೇಮಾನ್ ಹ್ಯಾಂಡ್ ಪೋಸ್ಟ್ ಮೊ. 9448721203. ವೀರಾಜಪೇಟೆ: ನೌಫಾಲ್ ಗ್ರೀನ್ ಲ್ಯಾಂಡ್ ಬನಾನ ಮಂಡಿ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ. ಮೊ. 483423238. ಮೂರ್ನಾಡು: ಹಸ್ಗರ್ ಕ್ವಾಲಿಟಿ ಕೋಲ್ಡ್ ಸ್ಟೋರೇಜ್ ಬಸ್ ನಿಲ್ದಾಣ ಮೊ. 9611722492. ನಾಪೋಕ್ಲು: ಹನೀಫಾ ಮೊ. 9980159845. ಶನಿವಾರಸಂತೆ: ಅಜರುದ್ದೀನ್ ಎಂ.ಬಿ. ಚಿಕನ್ ಸೆಂಟರ್ ಮೊ. 8792374123.