ಮಡಿಕೇರಿ, ಫೆ. 15: ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮಳೆ ಹಾನಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ರಸ್ತೆ, ತಡೆಗೋಡೆ, ಚರಂಡಿ, ಮೆಟ್ಟಿಲು ಮತ್ತು ಬೀದಿ ದೀಪ ದುರಸ್ತಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ.
ಕಾಮಗಾರಿಗಳ ವಿವರ: ಮಡಿಕೇರಿಯ ನಗರಸಭಾ ವ್ಯಾಪ್ತಿಯ ರಾಜಾಸೀಟ್ ರಸ್ತೆಯಲ್ಲಿ ಇಗ್ಲೂ ರೆಸಿಡೆನ್ಸಿ ಮುಂಭಾಗ ಎಸ್.ಪಿ. ಬಂಗಲೆ ಮುಂಭಾಗ ತಡೆಗೋಡೆ ನಿರ್ಮಾಣ ಕಾಮಗಾರಿಗೆ ರೂ. 172.90 ಲಕ್ಷ. ಮಡಿಕೇರಿ ನಗರಸಭಾ ವ್ಯಾಪ್ತಿಯ ಇಂದಿರಾ ಕ್ಯಾಂಟಿನ್ ಮುಂಭಾಗದಿಂದ ಸಾಯಿ ಹಾಕಿ ಮೈದಾನದವರೆಗೆ ರಸ್ತೆ ಕಾಂಕ್ರಿಟಿಕರಣಗೊಳಿಸುವ ಕಾಮಗಾರಿಗೆ ರೂ. 145.25 ಲಕ್ಷ. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗೆ ರೂ. 22 ಲಕ್ಷ. ಮಡಿಕೇರಿ ನಗರ ಸಭಾ ವ್ಯಾಪ್ತಿಯ ಎಲ್.ಐ.ಸಿ. ಕಚೇರಿ ಮುಂಭಾಗ ತಡೆಗೋಡೆ ನಿರ್ಮಾಣ ಕಾಮಗಾರಿಗೆ ರೂ. 9.85 ಲಕ್ಷ. ಮಡಿಕೇರಿ ನಗರಸಭಾ ವ್ಯಾಪ್ತಿಯ ಹಳೇ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ಕಾಮಗಾರಿಗೆ ರೂ. 296 ಲಕ್ಷ. ಒಟ್ಟು ಮಡಿಕೇರಿ ಜಿಲ್ಲಾ ವ್ಯಾಪ್ತಿಗೆ ರೂ. 646 ಲಕ್ಷ ನಿಗದಿ ಮಾಡಲಾಗಿದೆ.