ಮಡಿಕೇರಿ, ಫೆ. 15: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ ಇದರ ನೌಕರರ ಒಕ್ಕೂಟದ ಮಹಾಸಭೆ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಮುಂದಿನ ಐದು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಕಾಂಗೀರ ಪಿ. ಮಂದಣ್ಣ, ಉಪಾಧ್ಯಕ್ಷರಾಗಿ ಚೆಟ್ಟಿಮಾಡ ಎನ್. ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜೆ. ಆಂಟನಿ, ಖಜಾಂಚಿಯಾಗಿ ಎಂ.ಎಸ್. ಆಶೀಕ್ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಟಿ.ಜಿ. ಗಿರೀಶ್ ಕುಮಾರ್, ಎಂ.ಎಂ. ಪೆಮ್ಮಯ್ಯ, ಟಿ.ಎಸ್. ತುಂಗರಾಜ, ಎ.ಎ. ಅಜಿತ್, ಎ.ಎನ್. ನಗೀನ, ಹೆಚ್.ಟಿ. ವಿಜಯಕುಮಾರ್, ಈ.ಕೆ. ಶಶಿಧರನ್ ಹಾಗೂ ಕೆ.ಬಿ. ಗಿರೀಶ್ ಆಯ್ಕೆಯಾಗಿದ್ದಾರೆ.