ಪಾಲಿಬೆಟ್ಟ, ಫೆ. 14: ಶತಮಾನಗಳಿಂದ ಪವಾಡಗಳ ಚರಿತ್ರೆಗಳನ್ನೊಳಗೊಂಡ ಇತಿಹಾಸ ಪ್ರಸಿದ್ಧ ಭಾವೈಕ್ಯತೆಯ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್- ವಲಿಯವರ ಉರೂಸ್ ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವಜಾರೋಹಣ ಮಾಡುವ ಮೂಲಕ ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷ ಕೆ.ಎಚ್. ಅಬುಬಕ್ಕರ್ ಚಾಲನೆ ನೀಡಿದರು.
ಶುಕ್ರವಾರ ನಮಾಜಿನ ನಂತರ ಮುಸ್ಲಿಂ ಬಾಂಧವರು ಮಸೀದಿಯಿಂದ ಆರ್ಕಾಡ್ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ನೆರವೇರಿಸಲಾಯಿತು. ಪಾಲಿಬೆಟ್ಟ ಜುಮಾ ಮಸೀದಿ ಖತೀಬ್ ಅಲಿ ಸಖಾಫಿ ಪ್ರಾರ್ಥನೆ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದರು.
ಕೇರಳದ ಧಾರ್ಮಿಕ ಪಂಡಿತ ಸಯ್ಯದ್ ಪಝಲ್ ಹಾಮಿದ್ ಕೊಯಮ್ಮತಂಙಳ್ ಅನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ದುಆ ನೇತೃತ್ವ ನಡೆಯಿತು . ಮೌಲಾನಾ ಪೇರೋಡ್ ಅಬ್ದುಲ್ ರಹ್ ಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು.
ರಾತ್ರಿ ಸಯ್ಯದ್ ಸಿಹಾಬುದ್ದೀನ್ ಅಹ್ ದಲ್ ಮುತ್ತನ್ನೂರ್ ತಂಙಳ್ ಅವರಿಂದ ಧಾರ್ಮಿಕ ಉಪನ್ಯಾಸ ಹಾಗೂ ದಖ್ರ್ ದುಆ ಮಜ್ಲಿಸ್ ನಡೆಯಿತು
ಈ ಸಂದರ್ಭ ಪ್ರಮುಖರಾದ ಹನೀಫ್, ಅಬ್ದುಲ್ ಖಾದರ್, ಖಾಲಿದ್, ಅಬೂಬಕ್ಕರ್, ಇಸ್ಮಾಯಿಲ್, ರಶೀದ್, ಕರೀಂ, ಮುಸ್ತಫಾ ಸೇರಿದಂತೆ ಮತ್ತಿತರರು ಹಾಜರಿದ್ದರು.
- ವರದಿ: ಪುತ್ತಂ ಪ್ರದೀಪ್