ಮಡಿಕೇರಿ ಫೆ. 14: ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು ಕೇವಲ ಚುನಾವಣೆ ಸಂದರ್ಭ ಸಕ್ರಿಯರಾಗದೆ ಅವಕಾಶ ಸಿಕ್ಕಾಗಲೆಲ್ಲ ಜನಸಾಮಾನ್ಯರ ಸಮಸ್ಯೆಗಳು, ಗ್ರಾಮೀಣ ಕ್ರೀಡೆ, ಸಾಂಸ್ಕøತಿಕ ಆಚಾರ, ವಿಚಾರಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯವೆಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ರಫೀಕ್ ಅಹಮ್ಮದ್ ಹೇಳಿದರು.
ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಕ್ತಿ ಕಾರ್ಯಕ್ರಮ ಮತ್ತು ಎಲ್‍ಡಿಎಂಎಂಸಿ ಸಭೆÀ ಕುರಿತು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರು ವಿಭಾಗದ ಕಾಂಗ್ರೆಸ್ ಸಂಯೋಜಕÀ ಸಫೀಯುಲ್ಲ, ಪರ್ವಝ್, ಅಲ್ಪಸಂಖ್ಯಾತರ ಘಟಕದ ಮಂಡ್ಯ ಜಿಲ್ಲಾಧ್ಯಕ್ಷ ಕುರಂಬಾಯಿ, ರಾಜ್ಯ ಉಪಾಧ್ಯಕ್ಷ ಎ.ಕೆ. ಹ್ಯಾರಿಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್, ಕಾರ್ಯದರ್ಶಿ ಕೆ.ಎಂ. ಬಾವ, ಜಿಲ್ಲಾ ವಕ್ತಾರ ಟಿ.ಈ. ಸುರೇಶ್, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ಕುಶಾಲನಗರ ಬ್ಲಾಕ್ ಅಧ್ಯಕ್ಷ ಅನಂತಕುಮಾರ್, ಪ್ರಮುಖರಾದ ರಫೀಕ್ ಅಹಮ್ಮದ್, ಶಾಹೀದ್, ರಜಾಕ್, ಮಹಮ್ಮದ್ ಕಡಂಗ, ಫೈಝನ್, ಖೈರುನ್ನಿಸ, ಅಮೀನ ಮತ್ತಿತರರು ಉಪಸ್ಥಿತರಿದ್ದರು.